ಚಾರ್ಮಾಡಿ ನದಿಯಲ್ಲಿ ಗೋವುಗಳ ಅವಶೇಷ ಪತ್ತೆ

0
105

ಅಕ್ರಮ ಗೋ ಮಾಂಸ ಮಾಡಿ ತ್ಯಾಜ್ಯ 11 ಗೋಣಿ ಚೀಲದಲ್ಲಿ ತುಂಬಿಸಿ ಬಿಸಾಡಿರುವ ಶಂಕೆ

ಬೆಳ್ತಂಗಡಿ: ಚಾರ್ಮಾಡಿ ಸೇತುವೆ ಬಳಿ ದನದ ತಲೆ ಸೇರಿದಂತೆ ಅವಶೇಷಗಳು ಸುಮಾರು ಹನ್ನೊಂದು ಗೋಣಿಯಲ್ಲಿ ಪತ್ತೆಯಾಗಿದೆ. ಚಾರ್ಮಾಡಿ ಗ್ರಾಮದ ಅನ್ನಾರು ಎಂಬಲ್ಲಿ ಸೇತುವೆ ಅಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟ ರೀತಿಯಲ್ಲಿ ದನದ ತಲೆ, ಚರ್ಮ, ಹಾಗೂ ಇತರ ಅವಶೇಷಗಳು ಪತ್ತೆಯಾಗಿದ್ದು, ಯಾರೋ ಅಕ್ರಮವಾಗಿ ದನದ ಮಾಂಸ ಮಾಡಿ ಉಳಿದ ತ್ಯಾಜ್ಯಗಳನ್ನು ಗೋಣಿಯಲ್ಲಿ ತುಂಬಿಸಿ ಇಲ್ಲಿ ತಂದು ಹಾಕಿರಬಹುದು ಎಂದು ಸಂಶಯಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Previous articleಕನ್ನಡಕ್ಕಾಗಿ ಓಡು ಕಾರ್ಯಕ್ರಮಕ್ಕೆ ಚಾಲನೆ
Next articleಮಗು ಹೊತ್ತು ಕನ್ನಡಕ್ಕಾಗಿ ಓಟ…