ಚಾಕುವಿನಿಂದ ಇರಿದು ತಂಗಿಯ ಕಗ್ಗೊಲೆ

0
46

ಗದಗ: ಆಸ್ತಿ ಜಗಳದ ಕಾರಣ ಅಣ್ಣನೇ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಖುರ್ಷಿದಾ (೩೫) ಕೊಲೆಯಾದವಳು. ಕೊಲೆ ಆರೋಪಿ ಅಣ್ಣ ಈಶ್ವರಪ್ಪ ಕ್ಯಾದಿಗೇಹಳ್ಳಿ. ಅಣ್ಣನ ೧೫ ಎಕರೆ ಜಮೀನಿನಲ್ಲಿ ಪಾಲು ನೀಡುವಂತೆ ಒತ್ತಾಯಿಸಿ ತಂಗಿ ಖುರ್ಷಿದಾ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಳು. ಅಣ್ಣನೊಂದಿಗೆ ಪ್ರಕರಣದ ವಾಪಸ್ಸಾತಿ ಸಂಬಂಧ ವಾಗ್ವಾದಕ್ಕಿಳಿದ ತಂಗಿಯನ್ನು ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ. ಮುಂಡರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Previous articleಎಚ್‌ಡಿಕೆಗೆ ಲೋಕಾಯುಕ್ತ ನೋಟಿಸ್?
Next article೮೯ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ ಅಜ್ಜ