ಮಂಡ್ಯ: ಸುಮಾರವಿ ಕಲ್ಯಾಣ ಮಂಟಪದ ಬಳಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು ಕಾರಿನಲ್ಲಿದ್ದ ಮದನ್ ಮತ್ತು ಅವರ ಸ್ನೇಹಿತ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಮಂಡ್ಯ ಅಗ್ನಿಶಾಮಕದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅಕ್ಕಪಕ್ಕದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಕಾರು ಬೆಂಗಳೂರಿನಿಂದ ಕುಶಾಲ್ ನಗರಕ್ಕೆ ಹೊರಟಿದ್ದು ಮಾರ್ಗ ಮಧ್ಯದಲ್ಲಿ ಸುಟ್ಟ ವಾಸನೆ ಬಂದಿದ್ದರಿಂದ ಇಬ್ಬರು ಕಾರಿನಿಂದ ಇಳಿದು ನೋಡಿದಾಗ ದಟ್ಟವಾದ ಹೊಗೆ ಬಂದಿದ್ದು ಕೂಡಲೇ ಬೆಂಕಿ ಹತ್ತಿಕೊಂಡಿದೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.