ಚಪ್ಪಲಿ ಸೇವೆ ಮಾಡೋದಾಗಿ ಶ್ರೀಗಳಿಗೆ “ಪಂಚ್” ಕೊಟ್ಟ ಮಹಿಳೆ

0
14

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಮತ್ತೇ ಹೋರಾಟವನ್ನು ತೀವ್ರಗೊಳಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೋರ್ವಳು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದ ಪರಿಶ್ರಮ ಮಹಿಳಾ ಸಾಂತ್ವನ ಸಂಸ್ಥೆ ಅಧ್ಯಕ್ಷೆ ವಿದ್ಯಾ ಪಾಟೀಲ್ ಎಂಬುವವರು ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ವಾಗ್ದಾಳಿ ನಡೆಸಿದ್ದು, ಪಂಚಮಸಾಲಿ ಶ್ರೀಗಳಿಗೆ ಕಾವಿ ಬಿಚ್ಚಿ ಚಪ್ಪಲಿ ಸೇವೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿರುವ ಅವರು, ತಾವು ಬಸವಣ್ಣನವರ ಹೆಸರಿನಲ್ಲಿ ಕಾವಿ ಧರಿಸಿದನ್ನು ಮರೆತಿದ್ದಾರೆ. ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕೆ ನಿಮಗೆ ಯಾವ ಅರ್ಹತೆ ಇಲ್ಲ. ಬಸವಣ್ಣನವರಿಗೆ ಯಾವುದೇ ಜಾತಿ ಇಲ್ಲ, ನಿಮಗೆ ಜಾತಿ ಬಗ್ಗೆ ಸರ್ಕಾರದ ಜೊತೆ ಹೋರಾಟ ಮಾಡಬೇಕಿದ್ದರೆ ಕಾವಿ ಬಿಚ್ಚಿಟ್ಟು ಮಾಡಿ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Previous articleಜಾತಿ ಜನಗಣತಿ ಬೇಡ ಎನ್ನುವವರಿಗೂ ಅದರಲ್ಲೇನಿದೆ ಎಂದು ತಿಳಿದಿಲ್ಲ
Next articleಟಾಸ್‌ ಗೆದ್ದ ಟೀಂ ಇಂಡಿಯಾ