ಚಂದ್ರಶೇಖರ್ ಪ್ಯಾರಿಸ್ ಪ್ರಣಯಕ್ಕೆ 22ರ ಸಂಭ್ರಮ

0
8

ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್ ಕಥೆ ಬರೆದು ನಿರ್ದೇಶಿಸಿದ್ದ ಪ್ಯಾರಿಸ್ ಪ್ರಣಯ ಚಿತ್ರ ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಗಿತ್ತು, ಇಂದಿಗೆ 22 ವಸಂತಗಳನ್ನು ಕಂಡಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹಲವು ಗದ್ದಲದಲ್ಲಿ ಮುಳುಗಿ ಮರೆತಿದ್ದೆ. ಇಂದು ಏಪ್ರಿಲ್ 18 ! ನನ್ನ ಹಲವು ಚಿತ್ರಗಳು ಬಿಡುಗಡೆಯಾದದ್ದು ಇದೇ ತಿಂಗಳಿನಲ್ಲಿ. 22ವರ್ಷದ ಹಿಂದೆ ಬಿಡುಗಡೆಯಾದ ಈ ಚಿತ್ರ ಕಲ್ಪನಾ ಚಿತ್ರಮಂದಿರದಲ್ಲಿ 50 ದಿನಗಳನ್ನು ತುಂಬಿಸಿತ್ತು.ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಹಲವು ಪ್ರಯೋಗಗಳಿಂದ ಗಮನ ಸೆಳೆಯಿತು ಎಂದಿರುವ ಅವರು ಈ ಚಿತ್ರದ ಹಲವು ಸಾಧನೆಗಳ ಬಗೆಗೆ ಬರೆದುಕೊಂಡಿದ್ದಾರೆ 1) ಫಿಲಂ ಫೇರ್ ಮತ್ತು ರಾಜ್ಯಪ್ರಶಸ್ತಿ. 2) ಪಾಶ್ಚಾತ್ಯ-ಪೌರ್ವಾತ್ಯ ಸಂಗೀತ ಸಂಗಮ. 3)ಪ್ರಥಮ ಪರಿಚಯದ ಸಂಗೀತ ನಿರ್ದೇಶಕ ‘ಪ್ರಯೋಗ್’ಗೆ ರಾಜ್ಯ ಪ್ರಶಸ್ತಿ. 4)ಶ್ರೇಯಾ ಘೋಶಲ್ “ಕೃಷ್ಣಾ ನೀ ಬೇಗನೆ ಬಾರೋ” ಹಾಡಿನ ಮೂಲಕ ಕನ್ನಡಕ್ಕೆ ಪ್ರವೇಶ. 5) ರಘು ಮುಖರ್ಜಿ, ಮಿನಲ್ ಪಾಟೀಲ್ ಪ್ರಥಮ ರಂಗಪ್ರವೇಶ. 6)ಯೂರೋಪ್‌ನ ಫ್ರಾನ್ಸ್, ಇಟಲಿ, ಸ್ಪೈನ್ ದೇಶಗಳಲ್ಲಿ ಪ್ರಥಮ ಬಾರಿಗೆ ವ್ಯಾಪಕವಾಗಿ ಚಿತ್ರೀಕರಿಸಿದ ಕನ್ನಡ ಸಿನಿಮಾ. 7)ನಿರ್ಮಿಸಿದ್ದು ಅಮೆರಿಕಾ ನಿವಾಸಿಗಳಾದ ತುಮಕೂರು ದಯಾನಂದ್, ಅಮರನಾಥ್ ಗೌಡ,ಹರನಾಥ್ ಪೊಲಿಚೆರ್ಲ ಈ ತ್ರಿವಳಿ ಗೆಳೆಯರು. ಎಂಬುದನ್ನು ಮೆಲಕು ಹಾಕಿ ಈ ಚಿತ್ರದ ಕಲಾವಿದ, ತಂತ್ರಜ್ಞರೊಂದಿಗೆ ನನ್ನ ಪ್ರೀತಿಯ ಪ್ರೇಕ್ಷಕರನ್ನು ನೆನೆಯುತ್ತಿದ್ದೇನೆ ಎಂದಿದ್ದಾರೆ.

ಇನ್ನು ಈ ಚಿತ್ರದ ಹಾಡುಗಳಿಗೆ ಜನಪ್ರಿಯ ಬಾಲಿವುಡ್ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಘೋಶಾಲ್‍ರ ಪ್ರಥಮ ಪ್ರವೇಶವಾಗಿತ್ತು. ಟ್ವೆಂಟಿ ಫ಼ಸ್ಟ್ ಸೆಂಚುರಿ ಲಯನ್ಸ್ ಸಿನಮಾ ಚಿತ್ರವನ್ನು ನಿರ್ಮಿಸಿತು. ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಗಿತ್ತು.

Previous articleನೇಹಾ ಹತ್ಯೆಯಾಗಿ ಇಂದಿಗೆ ಒಂದು ವರ್ಷ
Next articleಭಗವದ್ಗೀತೆ, ನಾಟ್ಯಶಾಸ್ತ್ರ ಯುನೆಸ್ಕೋದ ವಿಶ್ವ ಸ್ಮರಣೆ ದಾಖಲೆಯಲ್ಲಿ ಸೇರ್ಪಡೆ