ಟೋಕಿಯೊ: ಗುರುವಾರ ಬೆಳಗಿನ ಜಾವ ನೈಋತ್ಯ ಜಪಾನಿನ ತನೆಗಾಶಿಮಾ ಬಾಹ್ಯಾಕಾಶ ನಿಲ್ದಾಣದಿಂದ ಎಕ್ಸ್ ರೇ ಟೆಲಿಸ್ಕೋಪ್ ಮತ್ತು ಚಂದ್ರನ ಲ್ಯಾಂಡರ್ ಅನ್ನು ಹೊತ್ತ ಎಚ್-೨ಎ ರಾಕೆಟ್ ಆಗಸಕ್ಕೆ ಹಾರಿದೆ. ಹಲವು ಬಾರಿ ಮುಂದೂಡಲ್ಪಟ್ಟ ಯೋಜನೆ ಇದಾಗಿದ್ದು, ಮೊದಲ ಬಾರಿಗೆ ಚಂದ್ರನ ಮೇಲೆ ಇಳಿಯುವ ಕನಸನ್ನು ನನಸು ಮಾಡಿಕೊಳ್ಳಲು ಜಪಾನ್ ಕೈಗೊಂಡಿರುವ ಪ್ರಯೋಗ ಇದಾಗಿದೆ.
XRISM (ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಮಿಷನ್) ಉಪಗ್ರಹವನ್ನು ಉಡಾವಣೆಯಾದ ೧೩ ನಿಮಿಷಗಳ ನಂತರ ಎಚ್-೨ಎ ರಾಕೆಟ್ ಮೂಲಕ ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ ಘೋಷಿಸಿತು. ಗೆಲಕ್ಸಿಗಳ ನಡುವಿನ ವೇಗ ಮತ್ತು ಇತರ ನಿಯತಾಂಕಗಳನ್ನು ಕಂಡುಹಿಡಿಯಲು ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಬ್ರಹ್ಮಾಂಡದ ರಹಸ್ಯಗಳನ್ನು ಬಿಡಿಸಲು ಮತ್ತು ಆಕಾಶ ವಸ್ತುಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ತಿಳಿಯಲು ಈ ಮಾಹಿತಿಯನ್ನು ಬಳಸಬಹುದು ಎಂದು ಜಪಾನ್ ಹೇಳಿದೆ.