ಬೆಳಗಾವಿ: ಖಾನಾಪುರ ತಾಲೂಕಿನ ನಿಟ್ಟೂರ ಗ್ರಾಮ ಪಂಚಾಯಿತ್‌ನ ಕ್ಲರ್ಕ್ ಕಮ್ ಡೇಟಾ ಆಪರೇಟರ್ ತನ್ನ ತೋಟದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಮೃತರನ್ನು ನಾಗುರ್ದಾ ಮೂಲದ ಸಂಜಯ ಲಕ್ಷ್ಮಣ ಕೋಳಿ (೪೫) ಎಂದು ಗುರುತಿಸಲಾಗಿದೆ. ೨೦೦೭ ರಿಂದ ನಿಟ್ಟೂರು ಗ್ರಾಮ ಪಂಚಾಯಿತ್‌ನಲ್ಲಿ ಕ್ಲರ್ಕ್ ಕಮ್ ಡೇಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಕಚೇರಿಯಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ಇದ್ದ ಕಾರಣ ಅವರು ಯಾವಾಗಲೂ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ.
ಇಂದು (ಏ.2) ಮುಂಜಾನೆ ಮನೆಯಿಂದ ಜಮೀನಿಗೆ ಹೋಗಿದ್ದ ಅವರ ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಮೃತ ಸಂಜಯನಿಗೆ ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳಿದ್ದಾರೆ. ಖಾನಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಪಂಚನಾಮ ನಡೆಸಿದರು.