ಗ್ರಾಪಂ ಕಚೇರಿಯಲ್ಲಿ ಮೌಲ್ವಿ ನಮಾಜು: ಹಿಂದೂ ಸಂಘಟನೆಗಳಿಂದ ಆಕ್ರೋಶ

0
29

ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಧರ್ಮಗುರು(ಮೌಲ್ವಿ) ಪ್ರಾರ್ಥನೆ(ನಮಾಜು) ಸಲ್ಲಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈಚೆಗೆ ನಡೆದ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಎಸ್​ಡಿಪಿಐ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಗುರುವಾರ ಅಧಿಕಾರ ಹಂಚಿಕೆಯಾಗಿದೆ.
ಕಾಂಗ್ರೆಸ್​ನ ಜಯಂತಿ ಖಾರ್ವಿ ಗ್ರಾ.ಪಂ. ಅಧ್ಯಕ್ಷೆಯಾದರೆ, ಎಸ್​ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಉಪಾಧ್ಯಕ್ಷರಾಗಿದ್ದಾರೆ. ತಬ್ರೇಜ್ ಉಪಾಧ್ಯಕ್ಷ ಅಧಿಕಾರ ಸ್ವೀಕಾರ ವೇಳೆ ಎಸ್​ಡಿಪಿಐ ಮುಖಂಡರು ಮೌಲ್ವಿಯನ್ನು ಕರೆಸಿ ನಮಾಜು ಮಾಡಿಸಿರುವ ವೀಡಿಯೊ ವೈರಲ್ ಆಗಿದ್ದು, ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

Previous articleಪದಕ ವಿಜೇತ ಕುಸ್ತಿಪಟುವಿಗೆ ಅದ್ಧೂರಿ ಸ್ವಾಗತ
Next articleನೂತನ ರಾಜ್ಯಪಾಲರಾಗಿ ಅಜಯ್ ಕುಮಾರ್ ಭಲ್ಲಾ