ಬಳ್ಳಾರಿ: ಗ್ಯಾರಂಟಿ ಯೋಜನೆಗಳ ಮುಂದುವರಿಕೆಯಲ್ಲಿ ಸರಕಾರದ ಬದ್ಧತೆ ಇದೆ. ಇವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಬಳ್ಳಾರಿಗೆ ಆಗಮಿಸಿದ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಗೃಹಜ್ಯೋತಿ ಹಣ, ಗೃಹಲಕ್ಷ್ಮೀ ಹಣನೂ ಬಿಡುಗಡೆ ಮಾಡ್ತೇವೆ. ಗ್ಯಾರಂಟಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತೇವೆ. ಪಾವತಿಯಾಗದ ಗೃಹಜ್ಯೋತಿ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈಗಿರುವ ಶಿಸ್ತಿನ ವ್ಯವಸ್ಥೆ ಏನಿದೆ ಅದರಲ್ಲಿ ಏನು ಬದಲಾವಣೆ ಆಗೋದಿಲ್ಲ. ಯಾವ ಗ್ರಾಹಕರಿಗೂ ತೊಂದರೆ ಆಗದ ಹಾಗೆ ಕ್ರಮಕೈಗೊಳ್ತೇವೆ ಎಂದರು.
ಗ್ಯಾರಂಟಿಯಿಂದ ಹೊರೆಯಾಗೋದು ಬೇರೆ ವಿಚಾರ, ಆದರೆ 58 ಸಾವಿರ ಕೋಟಿ ಹಣ ಅಂದ್ರೆ ಸಣ್ಣ ಮೊತ್ತ ಅಲ್ಲ. ಜನರಿಗಾಗಿ ಗ್ಯಾರಂಟಿ ಪ್ರಾರಂಭ ಮಾಡಿದ್ದೇವೆ, ನಮಗೆ ಬದ್ಧತೆ ಇದೆ ಮುಂದುವರೆಸುತ್ತೇವೆ. ನಮ್ಮ ಪಕ್ಷದ ಯಾವು ಶಾಸಕರೂ ಗ್ಯಾರಂಟಿ ವಿರುದ್ದ ಇಲ್ಲ. ಯಾರೂ ಕಡಿತ ಮಾಡಿ ಅಂತಾ ಹೇಳಿಲ್ಲ ಎಂದರು.
ಅಧ್ಯಕ್ಷರ ಬದಲಾವಣೆ ವಿಚಾರ ಇಲ್ಲ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಪೋಲಕಲ್ಪಿತ ಅನಿಸಿಕೆಗಳು. ಖರ್ಗೆ ಸಾಹೇಬರೇ ಹೇಳಿದ್ದಾರೆ, ಯಾವುದೇ ಬದಲಾವಣೆ ಚರ್ಚೆ ಇಲ್ಲ ಅಂತಾ. ಹಾಗೇನಾದ್ರು ಬದಲಾವಣೆ ಇದ್ದರೆ ನಿಮಗೆ ತಿಳಿಸ್ತೇವೆ ಎಂದಿದ್ದಾರೆ. ಸಿಎಂ ಬದಲಾವಣೆ, ಅಧ್ಯಕ್ಷರ ಬದಲಾವಣೆ ಬಗ್ಗೆ ಹೈ ಕಮಾಂಡ್ ಚರ್ಚೆ, ಪ್ರಸ್ತಾಪ ಯಾವುದೂ ಇಲ್ಲ ಎಂದಿದೆ. ಈ ಬಗ್ಗೆ ಯಾರೂ ಮಾತಾಡಬೇಡಿ ಅಂತಾ ಸೂಚನೆ ಇದೆ. ಖರ್ಗೆ ಅವರು ಹೇಳಿದ ಮೇಲೆ ರಾಜಣ್ಣನೂ ಸುಮ್ಮನಾಗಿದ್ದಾರೆ. ದೆಹಲಿಗೆ ಹೋಗೋರು ಬೇರೆ ಬೇರೆ ಕೆಲಸಗಳಿಗೆ ಹೋಗ್ತಾರೆ. ಸಿಎಂ ಬದಲಾವಣೆ, ಅಧ್ಯಕ್ಷರ ಬದಲಾವಣೆ ಬಗ್ಗೆ ಶಿಸ್ತಿನ ಕಾಂಗ್ರೆಸ್ ನಾಯಕರು ಯಾರೂ ಮಾತಾಡಬಾರದು ಅಂದಿದ್ದಾರೆ. ನಾವು ಶಿಸ್ತಿನ ಪಕ್ಷದವರು ನಾವು ಪಕ್ಷದ ಸೂಚನೆ ಪಾಲನೆ ಮಾಡ್ತೇವೆ ಎಂದರು.

























