ಗ್ಯಾರಂಟಿ ಮಾದರಿಯನ್ನು ಅನುಸರಿಸಿದ್ದನ್ನು ಹಿಪಾಕ್ರಸಿ ಎನ್ನಬೇಕೋ…

0
15

ಬೆಂಗಳೂರು: ಗೋಸುಂಬೆ ಗುಣದ ಬಿಜೆಪಿಯವರ ಡಬಲ್ ಸ್ಟ್ಯಾಂಡರ್ಡ್ ಬುದ್ದಿ ಹಲವು ಬಾರಿ ಸಾಬೀತಾಗಿದೆ. ಈಗ ಮತ್ತೊಂದು ನಿದರ್ಶನ ಸಿಕ್ಕಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಗ್ಯಾರಂಟಿ ಯೋಜನೆಗಳನ್ನು “ದಿವಾಳಿಯ ರೇವಡಿ“ ಎಂದು ಲೇವಡಿ ಮಾಡಿದ್ದರು. ನಂತರ ತಾವೇ ”ಮೋದಿ ಕಿ ಗ್ಯಾರಂಟಿ“ ಎನ್ನುತ್ತಾ ಗ್ಯಾರಂಟಿ ಪದವನ್ನು ಕದ್ದರು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು, ಝಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿಯವರು ಈಗ ಅದೇ ಗ್ಯಾರಂಟಿ ಮಾದರಿಯನ್ನು ಅನುಸರಿಸಿದ್ದನ್ನು ಹಿಪಾಕ್ರಸಿ ಎನ್ನಬೇಕೋ, ನಿರ್ಲಜ್ಜತನ ಎನ್ನಬೇಕೋ? ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಯಥಾವತ್ ನಕಲು ಮಾಡಿ ಝಾರ್ಖಂಡ್ ಚುನಾವಣೆಯ ಪ್ರಣಾಳಿಕೆ ತಯಾರಿಸಿರುವ ಬಿಜೆಪಿಯ ಈ ನಡೆಯ ಬಗ್ಗೆ ಪ್ರಲ್ಹಾದ ಜೋಶಿ ಅವರ ಪ್ರತಿಕ್ರಿಯೆ ಏನು? ಗ್ಯಾರಂಟಿಗಳನ್ನು ನಕಲು ಮಾಡಿರುವ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರ ಪ್ರತಿಕ್ರಿಯೆ ಕೇಳುವ ಕುತೂಹಲ ಹೆಚ್ಚಿದೆ ನನ್ನಲ್ಲಿ ಎಂದಿದ್ದಾರೆ.

Previous articleಕರ್ನಾಟಕದ ಉತ್ತರ ಒಳನಾಡಿನ ಹವಾಮಾನ ಮುನ್ಸೂಚನೆ
Next articleಖಾತೆಗೆ ಜಮೆ ಆಗದ ಭಾಗ್ಯಲಕ್ಷ್ಮೀ…