ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ

0
11

ಶಿವಮೊಗ್ಗ: ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು, ಗೆಲುವು ಇರುತ್ತದೆ. ನಾವು ಸೋತಿರಬಹುದು. ಈ ಕಾರಣಕ್ಕಾಗಿ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಯಾವ ಗ್ಯಾರಂಟಿಗಳನ್ನೂ ನಾವು ನಿಲ್ಲಿಸುವುದಿಲ್ಲ. ಸದ್ಯಕ್ಕೆ ಚುನಾವಣೆಯಲ್ಲಿ ನಡೆದ ತಂತ್ರ, ಕುತಂತ್ರದ ಬಗ್ಗೆಯೂ ನಾವು ಮಾತನಾಡುವುದಿಲ್ಲ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಬೂತ್ ಮಟ್ಟದಿಂದ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ಉತ್ತರ ಭಾರತದಲ್ಲಿ ಬಿಜೆಪಿಗೆ ಒಲವು ಸಿಕ್ಕಿಲ್ಲ ಎಂಬುದು ಕೂಡ ಸತ್ಯ. ಕಾಂಗ್ರೆಸ್ ಸಮಾಧಾನಕರವಾದ ಸ್ಥಾನಗಳನ್ನು ಗೆದ್ದಿದೆ. ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆಗಳಿಗೆ ನಾವು ಮತ್ತೆ ಸಿದ್ಧವಾಗುತ್ತೇವೆ. ಸೋಲಿನ ಹೊಣೆ ಹೊತ್ತುಕೊಳ್ಳುವುದರ ಜೊತೆಗೆ ಮುಂದಿನ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಯೋಚಿಸುತ್ತೇವೆ ಎಂದರು.

Previous articleಪ್ರಲ್ಹಾದ ಜೋಶಿಗೆ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ
Next articleಕಾರಾಗೃಹದಲ್ಲಿ ಅಪ್ಪನ ಸೆಲ್‌ನಲ್ಲೇ ಪ್ರಜ್ವಲ್ ವಾಸ