ಗೊಂಡ ವ್ಯಕ್ತಿಯ ಕೊಲೆ: ಸಮಾಜ ಬಾಂಧವರಿಂದ ಅಹೋರಾತ್ರಿ ಧರಣಿ

0
32

ಚಿಟಗುಪ್ಪ (ಬೀದರ್ ಜಿಲ್ಲೆ) : ತಾಲ್ಲೂಕಿನ ನಿರ್ಣವಾಡಿ ಗ್ರಾಮದಲ್ಲಿ ಗೊಂಡ ವ್ಯಕ್ತಿಯ ಕೊಲೆ ಖಂಡಿಸಿ ಮನ್ನಾಎಖೇಳಿ ಗ್ರಾಮದಲ್ಲಿ ಗೊಂಡ ಸಮಾಜ ಬಾಂಧವರಿಂದ ಅಹೋರಾತ್ರಿ ಧರಣಿ ಮುಂದುವರೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸುವಂತೆ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು ಪೊಲೀಸ್ ತಾರತಮ್ಯ ನೀತಿ ಖಂಡಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಕೊಲೆ ನಡೆದ ನಿರ್ಣವಾಡಿ ಗ್ರಾಮದಲ್ಲಿಯೂ ಕೂಡ ಬಿಗುವಿನ ವಾತಾವರಣವಿದ್ದು ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಹಿಂಸೆಯಾಗದಿರಲಿ ಹುಚ್ಚು ಅಭಿಮಾನ
Next articleರಾಮಮಂದಿರ ಉದ್ಘಾಟನೆ ಭಾರತದ ಹಬ್ಬ