ಗುತ್ತಿಗೆ ಕಾರ್ಮಿಕರ ವತಿಯಿಂದ ಸಂಸದ ಚೌಟರಿಗೆ ಮನವಿ

0
15

ಸುರತ್ಕಲ್: ಎಂ,ಅರ್,ಪಿ,ಎಲ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರ ಹಲವಾರು ಸಮಸ್ಯೆಗಳಿದ್ದು ಅದನ್ನು ಸರಿಪಡಿಸಲು ಮತ್ತು ಗುತ್ತಿಗೆ ಕಾರ್ಮಿಕರ ಮಾಸಿಕ ವೇತನ 21000 ಕ್ಕಿಂತ ಹೆಚ್ಚು ಇದ್ದಲ್ಲಿ ಇ.ಎಸ್.ಐ ( ಅರೋಗ್ಯ ವಿಮೆ ) ಸೌಲಭ್ಯ ಇಲ್ಲ ಅದಕ್ಕೆ ಮಾಸಿಕ ವೇತನ 35000 ರವರೆಗೆ ಅರೋಗ್ಯ ವಿಮೆ ಒದಗಿಸುವಂತೆ ಗುತ್ತಿಗೆ ಕಾರ್ಮಿಕರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಂಸದರು ಗುತ್ತಿಗೆ ಕಾರ್ಮಿಕರ ಕೆಲವೊಂದು ಸಮಸ್ಯೆಗಳನ್ನು ಎಂ,ಅರ್,ಪಿ,ಎಲ್ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಮಾತನಾಡಿ ಸರಿಪಡಿಸಲಾಗುವುದು ಮತ್ತು ಇ.ಎಸ್.ಐ (ಅರೋಗ್ಯ ವಿಮೆ ) ಸೌಲಭ್ಯ ಇಲ್ಲದಿರುವುದು ಇಡೀ ದೇಶದಲ್ಲಿನ ಕಾರ್ಮಿಕರ ದೊಡ್ಡ ಸಮಸ್ಯೆಯಾಗಿದ್ದು ಅದನ್ನು ಶೀಘ್ರವಾಗಿ ಸಮಸ್ಯೆ ಸರಿಪಡಿಸಲು ಅಸಾಧ್ಯ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರಿಪಡಿಸಲಾಗುವುದು ಕಾರ್ಮಿಕರ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಗೆ ಅರೋಗ್ಯ ವಿಮೆ ಬಗ್ಗೆ ಎಂ,ಅರ್,ಪಿ,ಎಲ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಕಾರ್ಮಿಕರ ಮುಖಂಡ ಪುಷ್ಷರಾಜ್ ಶೆಟ್ಟಿ ಮಧ್ಯ, ಭಾಸ್ಕರ್, ಸಂತೋಷ್ ಶೆಟ್ಟಿ, ಕರುಣಾಕರ ಮುಂತಾದವರು ಉಪಸ್ಥಿತರಿದ್ದರು

Previous articleಲೋಕಾಯುಕ್ತರಿಂದ 14 ಗ್ರಾಪಂಗಳಲ್ಲಿ ಏಕಕಾಲಕ್ಕೆ ದಾಳಿ
Next articleಕೃಷಿ ಭೂಮಿ ಭೂಸ್ವಾಧೀನ ತಡೆಗೆ ಸಚಿವ ಎಂ. ಬಿ. ಪಾಟೀಲಗೆ ಮನವಿ