ಗಿಗ್ ಕಾರ್ಮಿಕರ ಕಲ್ಯಾಣ ಮಸೂದೆಗೆ ಸರ್ಕಾರದ ಅಂಕಿತ

0
13

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವಿರತ ಪ್ರಯತ್ನಕ್ಕೆ ದೊರೆತ ಫಲ


ಬೆಂಗಳೂರು : ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ) ಮಂಡಳಿ ರಚನೆಗೆ ರಾಜ್ಯಪಾಲರಿಂದ ಅಂಕಿತ ದೊರೆತಿದೆ.
ರಾಜ್ಯದ ಅಸಂಘಟಿತ ವಲಯದ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಇಲಾಖೆಯ ಕ್ರಮಕ್ಕೆ ಇದರಿಂದ ಬಲ ಬಂದಂತಾಗಿದೆ.
ಗಿಗ್ ಕಾರ್ಮಿಕರಿಗೆ ಮಂಡಳಿಯ ರಚನೆ ಜೊತೆಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಷ್ಟಿಸಲು ಇದೀಗ ಅವಕಾಶ ಸಿಕ್ಕಿದೆ.
ಛಲ ಬಿಡದ ಸಚಿವ ಲಾಡ್‌ : ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬರುವಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಶ್ರಮ ಬಹಳಷ್ಟಿದೆ. ಛಲ ಬಿಡದೆ ಲಾಡ್‌ ಅವರು ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿದ್ದು ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಮಂಡಳಿ ರಚನೆ ಸಂಬಂಧ ಲಾಡ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೆಹಲಿಯಲ್ಲಿ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ರಾಜ್ಯಪಾಲರು ಅಂಕಿತದೊಂದಿಗೆ ಲಾಡ್‌ ಅವರ ಪ್ರಯತ್ನಕ್ಕೆ ಫಲ ಸಿಕ್ಕಂತೆ ಆಗಿದೆ.
ಇತ್ತೀಚೆಗೆ ಗಿಗ್‌ ಆರ್ಥಿಕತೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದು, ಲಕ್ಷಾಂತರ ಕಾರ್ಮಿಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರೆಲ್ಲರ ಕಲ್ಯಾಣಕ್ಕೆ ಹಾಗೂ ಸಾಮಾಜಿಕ ಸೇವಾ ಯೋಜನೆಗೆ ರೂಪಿಸಲು ಪ್ರತ್ಯೇಕ ಮಂಡಳಿ ರಚನೆಯಾದರೆ ಅನುಕೂಲವಾಗಲಿದೆ.

Previous articleರೈಲ್ವೆ ಸುರಕ್ಷತೆ ಸುಧಾರಣಾ ಕ್ರಮ: ನೈಋತ್ಯ ರೈಲ್ವೆ ಜಿಎಂ ರಿಂದ ಪ್ರಗತಿ ಪರಿಶೀಲನಾ ಸಭೆ
Next articleಉಭಯ ಶಾಸಕರ ಪಕ್ಷ ವಿರೋಧಿ ಧೋರಣೆ ವರಿಷ್ಠರಿಗೆ ವರದಿ ಸಲ್ಲಿಕೆ ನಂತರ ಕ್ರಮ