ಗಾಂಜಾ ಮಾರಾಟ ಹತ್ತು ಜನ‌ರ ಬಂಧನ: 1.779 ಕೆಜಿ ಗಾಂಜಾ ವಶ

0
7

ಹುಬ್ಬಳ್ಳಿ: ಗಾಂಜಾ‌ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹಾಗೂ ಆರೋಪಿತರಿಗೆ ಸಹಾಯ ಮಾಡಿದ‌ 8 ಜನರನ್ನು ಬಂಧಿಸಿ 1 ಕೆಜಿ 779 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಅಖಿಲೇಶ, ಆಂಥೋನಿ, ಕಿರಣ, ಮಹಾದೇವ, ಪ್ರಶಾಂತ, ಅರುಣ, ಲಕ್ಷ್ಮಣ, ಫರನ್, ಆದರ್ಶ, ವಿಶಾಲ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಮಾದಕ ವಸ್ತು ಗಾಂಜಾವನ್ನು ಯಾರೋ ಇಬ್ಬರು ವ್ಯಕ್ತಿಗಳು ಮಾರಾಟ ಮಾಡುತ್ತಿದ್ದು ಅವರ ಹತ್ತಿರ ಹಲವಾರು ಜನರು ಗಾಂಜಾವನ್ನು ಖರೀದಿ ಮಾಡಲು ನಿಂತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಬೆಂಡಿಗೇರಿ ಠಾಣೆಯ ಪೊಲೀಸರು ದಾಳಿ ನಡೆಸಿ, ಒಟ್ಟು 1.779 ಕೆ.ಜಿ ಗಾಂಜಾ ಹಾಗೂ ಹಣ 2000 ರೂಗಳನ್ನು ವಶಪಡಿಸಿಕೊಂಡಿದ್ದಾರೆ.

Previous articleನಿಮ್ಮಿಂದ ಪ್ರತಿಭಟನಾಕಾರರನ್ನು ತಡೆಯಬಹುದಷ್ಟೆ, ಪ್ರತಿಭಟನೆಯನ್ನಲ್ಲ…
Next articleಕೇಜ್ರಿವಾಲ್‌ಗೆ ಜಾಮೀನು ಮಂಜೂರು