ಬೆಳಗಾವಿ: ಬೆಳಗಾವಿಯ ಕೇಂದ್ರ ಕಾರಾಗ್ರಹದಲ್ಲಿ ಗಾಂಜಾಕ್ಕಾಗಿ ಕೈದಿಯೊಬ್ಬ ಸಹಾಯಕ ಜೈಲರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಇಂದು ಬೆಳಕಿಗೆ ಬಂದಿದೆ.
ಈ ಘಟನೆ ಡಿ. ೧೧ರಂದು ನಡೆದಿದ್ದು ಜೈಲಿನಲ್ಲಿರುವ ಕೈದಿ ಶಾಹಿದ್ ಖುರೇಶಿ ಗಾಂಜಾ ಪಾಕೀಟು ಹಿಡಿದುಕೊಂಡಿದ್ದಾಗ ಅದನ್ನು ಕಂಡ ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಮಾದಕ ವಸ್ತುವನ್ನು ಕಸಿದುಕೊಂಡು ಗದರಿಸಿ ಕಳಿಸಿದ್ದಾನೆ. ಇದೇ ಕೋಪಕ್ಕೆ ಖುರೇಶಿ, ಕಾಂಬಳೆ ಅವರ ಮೇಲೆ ಮಾರಕಾಸ್ತ್ರಗಳಿಂದ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.
ತೀವ್ರ ಗಾಯಗೊಂಡ ಸಹಾಯಕ ಜೈಲರ್ ಕಾಂಬಳೆಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹ
ಘಟನೆ ನಡೆದಿರುವುದು ಇಲಾಖೆ ಮುಜುಗುರಕ್ಕೆ ಒಳಗಾಗುವಂತಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.