ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ !

0
6

ಬುಲದಾಣಾ(ಮಹಾರಾಷ್ಟ್ರ): ಗರ್ಭಿಣಿಯ ಗರ್ಭದಲ್ಲಿನ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದ್ದು ಇದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದೆ.
ಬುಲದಾಣಾ ಜಿಲ್ಲಾಸ್ಪತ್ರೆಗೆ ತಪಾಸಣೆಗಾಗಿ ಬಂದ ೩೨ ವರ್ಷದ ಗರ್ಭಿಣಿಯ ಹೊಟ್ಟೆಯಲ್ಲಿರುವ ಮಗುವಿನಲ್ಲಿ ಭ್ರೂಣ ಇರುವುದನ್ನು ಪ್ರಸೂತಿ ತಜ್ಞ ಡಾ.ಪ್ರಸಾದ್ ಅಗರ್ವಾಲ್ ಪತ್ತೆ ಹಚ್ಚಿದ್ದಾರೆ. ಐದು ಲಕ್ಷ ಗರ್ಭಿಣಿಯರಲ್ಲಿ ಒಬ್ಬರಲ್ಲಿ ಈ ರೀತಿ ಕಂಡುಬರುತ್ತದೆ. ಜಗತ್ತಿನಲ್ಲಿ ೨೦೦ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ೧೦ ರಿಂದ ೧೫ ಪ್ರಕರಣಗಳು ಪತ್ತೆಯಾಗಿವೆ. ರೆಡಿಯೊಲಾಜಿಸ್ಟ್ ಬಳಿ ಸಲಹೆ ಕೂಡ ಕೇಳಲಾಗಿದೆ. ಗರ್ಭಿಣಿಯ ಸುರಕ್ಷಿತ ಹೆರಿಗಾಗಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಸಾದ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

Previous articleಗೆಜೆಟೆಡ್ ಪ್ರೊಬೆಷನರಿ ಹುದ್ದೆ ಪರೀಕ್ಷೆಗೆ ೧೦ ಕೃಪಾಂಕಕ್ಕೆ ಅಸ್ತು
Next articleದೈವ ಕಾರ್ಣಿಕದಂತೆ 300 ವರ್ಷ ಹಳೆಯ ದೈವಸ್ಥಾನ ಪತ್ತೆ