ಗದಗ ರಾಬರಿ ಪ್ರಕರಣ: ಎಸ್ಕೆಪ್‌ಗೆ ಯತ್ನಸಿದ ರೌಡಿಶೀಟರ್‌ಗೆ ಗುಂಡೇಟು

0
10

ಗದಗ: ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಕಣಗಿನಹಾಳ ರಸ್ತೆಯಲ್ಲಿ ನಡೆದಿದೆ.
ರಾಬರಿ ಕೇಸ್‌ಗೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಬಂದಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೆಪ್ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾರೆ. ಪೋಲಿಸ್ ಹೆಸರಿನಲ್ಲಿ ರಾಬರಿ ಮಾಡುತ್ತಿದ್ದ ಆರೋಪಿ ಸಂಜಯ ಮೇಲೆ ಪಿಎಸ್ ಐ ಸಂಗಮೇಶ್ ಶಿವಯೋಗಿ ಅವರಿಂದ ಫೈರಿಂಗ್‌ ನಡೆದಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರಕಾಶ್ ಗಾಣಿಗೇರ್ ಅವರಿಗೆ ಕೈ, ಕಾಲಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸಂಜಯ್ ವಿರುದ್ಧ ರಾಬರಿ, ಕೊಲೆಯತ್ನಕ್ಕೆ ಸಂಬಂಧಿಸಿದಂತೆ 12 ಕೇಸ್ ದಾಖಲಾಗಿತ್ತು. ಇನ್ನೂ ಗಾಯಗೊಂಡ ಆರೋಪಿ ಸಂಜಯ್ ಕೊಪ್ಪದ್ ಹಾಗೂ ಸಿಬ್ಬಂದಿ ಪ್ರಕಾಶ್‌ ಅವರಿಗೆ ಜಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Previous articleBMTC, KUWSDB, KKRTC ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ
Next articleಎಸ್‌ಸಿ, ಎಸ್‌ಟಿ ಉಪ ವರ್ಗೀಕರಣಕ್ಕೆ ಅಸ್ತು