ಹುಬ್ಬಳ್ಳಿ: ಗದಗ ರಸ್ತೆ ಚೆಕ್ ಪೋಸ್ಟ್ ದಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ದಾಖಲೆ ರಹಿತ 2 ಲಕ್ ನಗದು ಹಣ ಪತ್ತೆ ಆಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಎಲ್ಲ ಚೆಕ್ ಪೊಸ್ಟ್ ಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಿದ್ದು, ಇಂದು ಸಂಜೆ ಸಹಾಯಕ ಚುನಾವಣಾ ಅಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರ ನೇತೃತ್ವದಲ್ಲಿ ಹಣ ವಶಕ್ಕೆ ಪಡೆಯಲಾಗಿದೆ.
ಗದಗ ರೋಡ್ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ತಿಪಟೂರು ನಿಂದ ಹುಬ್ಬಳ್ಳಿಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 2 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ ಈಶ್ವರ ಉಳ್ಳಾಗಡ್ಡಿ, ಎಂಸಿಸಿ ನೊಡೆಲ್ ಅಧಿಕಾರಿ ರವೀಂದ್ರ ಕುಮಾರ್, ಕಿರಣ್ ಮಜ್ಜಿಗೇರಿ, ಕುಶಾಲ್ ಹುಕ್ಕೇರಿ, ಅಯ್ಯಪ್ಪ ಮನ್ನಿಕೇರಿ,ಲೋಕೇಶ್ ಶಿರಹಟ್ಟಿ, ಮಂಜುನಾಥ, ದೇವಪ್ಪ ಭಾಗವಹಿಸಿದ್ದರು ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.