ಗಂಗಾವತಿ(ಕೊಪ್ಪಳ): ಗಂಗಾವತಿ ಗಣೇಶ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ನಗರದ ಗುಂಡಮ್ಮ ಕ್ಯಾಂಪಿನ ನಿವಾಸಿಗಳಾದ ದುರ್ಗಾ ಮಣಿಕಂಠ(೨೪), ಎನ್.ಜಂಬಣ್ಣ (೨೫), ಅಬ್ಬಾಸ ಅಲಿ(೧೯), ಧರ್ಮ(೨೬) ಮತ್ತು ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಓಟ್ಟು ೫ ಜನರನ್ನು ವಶಕ್ಕೆ ಪಡೆಯಲಾಗಿದೆ. ಗಲಾಟೆಯಲ್ಲಿ ಒಟ್ಟು ೨೦ ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ೫ ಜನರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.