ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ

0
13

ರಾಣಿ ಚನ್ನಮ್ಮ ವೃತ್ತದಲ್ಲಿ ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಡಿಜೆಗೆ ಕುಣಿದು ಕುಪ್ಪಳಿಸುವ ವೇಳೆ, ಮೂವರು ಯುವಕರ ಮೇಲೆ ಗುಂಪೊಂದು‌ ಏಕಾಏಕಿ ದಾಳಿ ಮಾಡಿದೆ

ಬೆಳಗಾವಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ಮೇಲೆ ಗುಂಪೊಂದು‌ ಚಾಕುವಿನಿಂದ ದಾಳಿ ಮಾಡಿದೆ.
ನಗರದಲ್ಲಿ ಮಂಗಳವಾರ ತಡರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ, ರಾಣಿ ಚನ್ನಮ್ಮ ವೃತ್ತದಲ್ಲಿ ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಡಿಜೆಗೆ ಕುಣಿದು ಕುಪ್ಪಳಿಸುವ ವೇಳೆ, ಮೂವರು ಯುವಕರ ಮೇಲೆ ಗುಂಪೊಂದು‌ ಏಕಾಏಕಿ ದಾಳಿ ಮಾಡಿದ್ದು, ಘಟ‌ನೆಯಲ್ಲಿ ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ್ ಗುಂಡ್ಯಾಗೋಳಗೆ ಚೂರಿಯಿಂದ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಇರಿತದಿಂದ ತೀವ್ರ ಅಸ್ವಸ್ಥರಾಗಿದ್ದ ಮೂವರು ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ, ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಕಾಣದಂತೆ ಮಾಯವಾದನು
Next articleನಾಡಹಬ್ಬ ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ