ಗಣರಾಜ್ಯೋತ್ಸವದಲ್ಲಿ ನಾರಿಶಕ್ತಿ

0
19
ನಾರಿಶಕ್ತಿ

2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕರ್ನಾಟಕದ ಮಹಿಳೆಯರ ಶೌರ್ಯ, ರೇಷ್ಮೆ ಕರ್ನಾಟಕದ ಹೆಮ್ಮೆ ಕರ್ನಾಟಕದ ಪುಷ್ಪೋದ್ಯಮ ಕರ್ನಾಟಕ : ಸಿರಿಧಾನ್ಯದ ನಾಯಕ, ನಾರಿ ಶಕ್ತಿ ಈ ಐದು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಇದರಲ್ಲಿ ಸ್ತ್ರೀ ಸಬಲೀಕರಣವನ್ನು ಬಿಂಬಿಸುವ ʼನಾರಿ ಶಕ್ತಿʼ ವಿಷಯ ಪರಿಣತರ ತಂಡ ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶನಗೊಂಡಿತು. ಈ ಮೂಲಕ ಸತತ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯಸ್ಸು ಕರ್ನಾಟಕ ಪಾಲಾಯಿತು. ಕರ್ನಾಟಕದ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲುಮರದ ತಿಮ್ಮಕ್ಕರನ್ನೊಳಗೊಂಡ ನಾರಿಶಕ್ತಿ ಸ್ತಬ್ಧಚಿತ್ರ ನವದೆಹಲಿಯ ಕರ್ತವ್ಯಪಥದಲ್ಲಿ ವಿಜೃಂಭಿಸಿದೆ.

Previous articleಭಾರತದ ಪ್ರಗತಿಗೆ ಸಂಕಲ್ಪ ಮಾಡೋಣ: ಸಿಎಂ ಬೊಮ್ಮಾಯಿ ಕರೆ
Next articleಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಿ