ತುಮಕೂರು: ಗಣಪತಿ ವಿಸರ್ಜನೆ ಮಾಡುವ ವೇಳೆ ಮೂವರು ಕಟ್ಟೆಯಲ್ಲಿ ಮುಳುಗಿ ನೀರುಪಾಲಾಗಿರುವ ದುರ್ಘಟನೆ ತುರುವೇಕೆರೆ ತಾಲ್ಲೂಕಿನ ರಂಗನಹಟ್ಟಿಯಲ್ಲಿ ನಡೆದಿದೆ. ಭಾನುವಾರ ಗಣೇಶನ ವಿಸರ್ಜನೆ ಮಾಡಲು ಶರತ್, ದಯಾನಂದ್ ಕಟ್ಟೆಗೆ ಇಳಿದಿದ್ದು, ಕೆಸರಿನಿಂದ ಕಾಲುಗಳು ಹೂತುಕೊಂಡಾಗ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಶರತ್ ತಂದೆ ರೇವಣ್ಣ ಅವರೂ ನೀರಿಗೆ ಧುಮಿಕಿದ್ದಾರೆ. ಅವರೂ ಈಜಲು ಆಗದೆ ನೀರಿನಲ್ಲಿ ಮುಳುಗಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.