ಚಿಕ್ಕಮಗಳೂರು : ಟಾಟಾ ಏಸ್ ಆಟೋ ಪಲ್ಟಿ ಆಗಿ ಇಬ್ಬರು ಸ್ಥಳದಲ್ಲೇ ಇಬ್ಬರು ಸಾವಪ್ಪಿದ್ದಾರೆ.
ಗಣಪತಿ ತರಲು 9 ಜನ ಯುವಕರು ತೆರಳುತ್ತಿದ್ದಾಗ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಈ ಘಟನೆ ನಡೆದಿದೆ.
ಶ್ರೀಧರ್ (20) ಧನುಷ್ (20) ಮೃತಪಟ್ಟಿದ್ದು, ಇಬ್ಬರು ಯುವಕರ ತಲೆಗೆ ಗಂಭೀರ ಗಾಯ ಆಗಿ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿಸಲಾಗಿದೆ. ಇನ್ನು ಮೂವರು ಯುವಕರಿಗೆ ಗಾಯವಾಗಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರು ಹಾಗೂ ಗಾಯಾಳುಗಳೆಲ್ಲ ಲಿಂಗದಹಳ್ಳಿ ನಿವಾಸಿಗಳು, ಗಣಪತಿ ತರಲು ಟಾಟಾ ಏಸ್ ನಲ್ಲಿ ತರೀಕೆರೆಗೆ ಹೋಗುತ್ತಿದ್ದರು, ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಆಗಿದೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ