ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಇಂದು ಸಂಜೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಪಿಯಾ ಬೆನಗಲ್ ಅವರು ದೃಢಪಡಿಸಿದ್ದಾರೆ.
ಡಿಸೆಂಬರ್ 14ರಂದು ತಮ್ಮ 90ನೇ ಜನ್ಮದಿನವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಶ್ಯಾಮ್ ಬೆನಗಲ್ ಆಚರಿಸಿಕೊಂಡಿದ್ದರು.
ಮಂಥನ್, ಜುಬೇದಾ ಮತ್ತು ಸರ್ದಾರಿ ಬೇಗಂ ಅವರ ಪ್ರಸಿದ್ಧ ಚಲನಚಿತ್ರಗಳು. ಭಾರತ ಸರ್ಕಾರ 1976ರಲ್ಲಿ ಪದ್ಮಶ್ರೀ ಮತ್ತು 1991ರಲ್ಲಿ ಪದ್ಮಭೂಷಣ ನೀಡಿ ಶ್ಯಾಮ ಅವರನ್ನು ಗೌರವಿಸಿತ್ತು.