ರಾಯಚೂರು: ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸ್ ಇಲಾಖೆಯ ಎಎಸ್ಐ ಸೇರಿದಂತೆ ನಾಲ್ವರು ಆರೋಪ ಆರೋಪಿಗಳನ್ನು ಪಶ್ಚಿಮ ಠಾಣೆಯ ಪೋಲೀಸರು ಸೋಮವಾರ ಬಂಧಿಸಿದ್ದಾರೆ. ಡಿಎಆರ್ ಎಎಸ್ಐ ಮರಿಲಿಂಗ, ಸದ್ದಾಂ, ಸಿದ್ದಲಿಂಗಪ್ಪ, ರವಿ ಎಂದು ತಿಳಿದುಬಂದಿದೆ.
ರಾಯಚೂರು ಗಡಿಭಾಗದ ಗ್ರಾಮಗಳಲ್ಲಿ ಹಾಗೂ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಖೋಟಾ ನೋಟುಗಳ ಚಲಾವಣೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿತ್ತು. ಗಡಿಭಾಗದ ಅನೇಕ ಪೆಟ್ರೋಲ್ ಬಂಕ್ ಗಳಲ್ಲಿ ನಕಲಿ ನೋಟುಗಳು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಎಸ್ ಪಿ.ಪುಟ್ಟಮಾದಯ್ಯ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸಿತು.
ಸೋಮವಾರ ನಗರದ ಆಶಾಪುರ ರಸ್ತೆಯ ಆರೋಪಿ ಸದ್ದಾಂ ಮನೆಯಲ್ಲಿ ನಕಲಿ ನೋಟುಗಳ ಸಮೇತ ನಾಲ್ವರನ್ನು ಪಶ್ಚಿಮ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂದಿಸಿದ್ದಾರೆ.
ಬಂಧಿತರಲ್ಲಿ ಮೂವರು ಟ್ರಾನ್ಸ್ ಪೋರ್ಟ್ ನಲ್ಲಿ ಚಾಲಕ, ಕ್ಲಿನರ್ ಹಾಗೂ ಲಾರಿ ಮಾಲೀಕರಾಗಿದ್ದು ಆಂಧಪ್ರದೇಶದಿಂದ ನಕಲಿ ನೋಟುಗಳನ್ನು ಪಡೆದು ಜಿಲ್ಲೆಯಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು.
ನಕಲಿ ನೋಟುಗಳನ್ನು ಪಡೆದು 1 ಸಾವಿರ ರೂಪಾಯಿಗೆ 3 ಸಾವಿರ ಪಡೆದು ಮನಿ ಡಬ್ಲಿಂಗ್ ಮಾಡುತ್ತಿದ್ದರು. ದುರಾದೃಷ್ಟವಶಾತ್ ವಿಷಯೇನಂದರೆ ಆರೋಪಿಗಳು ನಕಲಿ ನೋಟಿನ ದಂಧೆ ಆರಂಭಿಸಿದ ಮೊದಲನೇ ದಿನವೇ ಪೊಲೀಸರ ಕೈಗೆ ಸಿಕ್ಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.