ಕರ್ನಾಟಕದಲ್ಲಿ ಅರಣ್ಯ ನಾಶ ಬಿಜೆಪಿ ಸರ್ಕಾರದ ಕೊಡುಗೆ
ಬೆಂಗಳೂರು: ಭಗವಂತ ಖೂಬಾ ಮೊದಲು ಪತ್ರಿಕೆ ಓದೋದು ಕಲಿಯಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅರಣ್ಯ ನಾಶ ದೇಶಕ್ಕೆ ಕರ್ನಾಟಕ ನಂ. 2 ವರದಿಯ ಮೊದಲ ಪ್ಯಾರಾದಲ್ಲಿಯೇ 2021ರಿಂದ 2023ರ ಸಾಲಿನಲ್ಲಿ ನಡೆದ ಸಮೀಕ್ಷೆ ಇದೆಂಬುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಅರಣ್ಯ ನಾಶ ಬಿಜೆಪಿ ಸರ್ಕಾರದ ಕೊಡುಗೆ. 2021ರಿಂದ 2023ರ ಆರ್ಥಿಕ ವರ್ಷದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿಯೇ ಎಂಬುದನ್ನು ಮೊದಲು ಖೂಬಾ ಅರಿತು ಮಾತನಾಡಬೇಕು. ಇನ್ನು ನಾನು ಅರಣ್ಯ ಸಚಿವನಾದ ಬಳಿಕ ಅಕ್ರಮ ಅರಣ್ಯ ಒತ್ತುವರಿಯನ್ನು ತೆರವು ಮಾಡಿಸುತ್ತಿದ್ದು, ಖೂಬಾ ಆತ್ಮೀಯರೇ ಒತ್ತುವರಿ ಮಾಡಿದ್ದನ್ನೂ ತೆರವು ಮಾಡಿಸಿದ್ದೇನೆ. ಹೀಗಾಗಿ ಹತಾಶೆಯಿಂದ ಮಾಜಿ ಸಂಸದರು ಮಿಥ್ಯಾರೋಪ ಮಾಡುತ್ತಿದ್ದು, ಇದಕ್ಕೆ ಮೂರು ಕಾಸಿನ ಬೆಲೆ ಇರುವುದಿಲ್ಲ ಎಂದಿದ್ದಾರೆ.