ಖಾತೆ ವರ್ಗಾವಣೆಗೆ ಲಂಚ ಪಡೆಯುತ್ತಿದ್ದವ ಲೋಕಾ ಬಲೆಗೆ

0
38

ದಾವಣಗೆರೆ: ನಿವೇಶನ ಖಾತೆ ವರ್ಗಾವಣೆ ಮಾಡಿಕೊಡಲು ೨,೫೦೦ ರೂ. ಲಂಚ ಪಡೆಯುತ್ತಿದ್ದ ವೇಳೆ ಮಹಾನಗರ ಪಾಲಿಕೆ ವಲಯ ಕಚೇರಿ-೨ರ ಪ್ರಥಮ ದರ್ಜೆ ಸಹಾಯಕನನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಹಾನಗರ ಪಾಲಿಕೆ ವಲಯ ಕಚೇರಿ-೨ರ ಪ್ರಥಮ ದರ್ಜೆ ಸಹಾಯಕ ಪಾಲನಾಯಕ ಬಂಧಿತ ಆರೋಪಿ. ದಾವಣಗೆರೆ ಮಹಾನಗರ ಪಾಲಿಕೆಯ 30ನೇ ವಾರ್ಡ್‌ನ ಆವರಗೆರೆ ಸಮೀಪದ ಬಾಡ ಕ್ರಾಸ್‌ನಲ್ಲಿ ಖಾಲಿ ನಿವೇಶನವನ್ನ ತಮ್ಮ ಸಹೋದರಿಗೆ ಖಾತೆ ಬದಲಾವಣೆಗೆ ಜಿ.ಯು. ಬಸವನಗೌಡ ಎಂಬುವರು ಮಹಾನಗರ ಪಾಲಿಕೆ ವಲಯ ಕಚೇರಿ-೨ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಮಾಡಿಕೊಡಲು ಪ್ರಥಮ ದರ್ಜೆ ಸಹಾಯಕ ಪಾಲನಾಯಕ ೨,೫೦೦ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಬಸವನಗೌಡ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪ್ರಥಮ ದರ್ಜೆ ಸಹಾಯಕ ಪಾಲನಾಯಕ ಕಚೇರಿಯಲ್ಲೇ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಪಾಲನಾಯಕನನ್ನು ಬಂಧಿಸಿದ್ದಾರೆ.

Previous articleಮಾ.16 ರಂದು ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ
Next articleಅಪಘಾತ: ಉಪಸಭಾಪತಿಗೆ ಗಾಯ