ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ‘ಐಸಾ ಮೌಕಾ ಫಿರ್ ಕಹಾ ಮಿಲೇಗಾ’ ಹಾಡನ್ನು ಕೇಳಿರಬೇಕು ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಖರ್ಗೆಯವರು ಸುದೀರ್ಘವಾಗಿ ಮಾತನಾಡಿದ್ದಕ್ಕಾಗಿ ನನಗೆ ಸಂತೋಷವಾಯಿತು, ಆದರೆ ಅವರಿಗೆ ಇಷ್ಟು ಮಾತನಾಡಲು ಹೇಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಆದರೆ ಇಂದು ಇಬ್ಬರು ವಿಶೇಷ ಕಮಾಂಡರ್‌ಗಳು ಇಲ್ಲ ಎಂದು ನಾನು ಅರಿತುಕೊಂಡೆ. ಖರ್ಗೆ ಈ ಅವಕಾಶವನ್ನು ಬಳಸಿಕೊಂಡರು. ಖರ್ಗೆ ಅವರು ಬೌಂಡರಿ ಬಾರಿಸಿದರು ಮತ್ತು ಆನಂದಿಸಿದರು. ಅವರು ‘ಐಸಾ ಮೌಕಾ ಫಿರ್ ಕಹಾ ಮಿಲೇಗಾ’ ಎಂಬ ಹಾಡನ್ನು ಕೇಳಿರಬೇಕು” ಎಂದು ಪ್ರಧಾನಿ ವ್ಯಂಗ್ಯವಾಡಿದರು.