ಖರ್ಗೆಗೆ ಪ್ರಧಾನಿ ತಿರುಗೇಟು ಮಮತಾ ವಿರುದ್ಧ ಆಕ್ರೋಶ

0
16
ಮೋದಿ

ನವಾಡಾ/ಜಲಪಾಯಿಗುಡಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ೩೭೦ ನೇ ವಿಧಿ ಕುರಿತು ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಟುವಾದ ವಾಗ್ದಾಳಿ ನಡೆಸಿದರು. ಬಿಹಾರದ ನವಾಡದಲ್ಲಿ ಭಾನುವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ರಾಷ್ಟ್ರೀಯರಾದ ಖರ್ಗೆಯವರು,ಮೋದಿ ರಾಜಸ್ಥಾನಕ್ಕೆ ಬಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದಾದ ಕುರಿತು ಏಕೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದ್ದರು.
ಅದಕ್ಕೆ ಉತ್ತರಿಸಿದ ಮೋದಿ, ಈ ಪ್ರಶ್ನೆ ಕೇಳಿ ನನಗೆ ನಾಚಿಕೆಯಾಯಿತು. ಕಾಶ್ಮೀರವನ್ನು ಉಳಿಸಲು ಬಿಹಾರದ ಅನೇಕರು ಬಲಿದಾನ ಮಾಡಿದ್ದಾರೆ. ಕಾಶ್ಮೀರವನ್ನು ಉಳಿಸಲು ಬಿಹಾರದ ಯೋಧರು ಗಡಿ ಕಾಯುತ್ತಿದ್ದಾರೆ, ಪ್ರಾಣ ತೆತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕೇಳಿಸಿಕೊಳ್ಳಬೇಕು’ ಎಂದರು. ಅವರು ಕಾಂಗ್ರೆಸ್ ಅನ್ನುತುಕ್ಡೆ-ತುಕ್ಡೆ ಗ್ಯಾಂಗ್’ಗೆ ಹೋಲಿಸಿದ ಮೋದಿ, ಆ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇಂಥವರನ್ನು ಜನ ಗೌರವಿಸಬೇಕೇ, ಕ್ಷಮಿಸಬೇಕೇ? ಎಂದು ಪ್ರಶ್ನಿಸಿದರು.
ಅದೇ ರೀತಿ, ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಎನ್‌ಐಎ ಅಧಿಕಾರಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ, `ಟಿಎಂಸಿ ತನ್ನ ಭ್ರಷ್ಟ ನಾಯಕರನ್ನು ರಕ್ಷಿಸಿ, ಅವರ ಅಪರಾಧಗಳಿಗೆ ಮುಕ್ತ ಲೈಸೆನ್ಸ್ ನೀಡಲು ಯತ್ನಿಸುತ್ತಿದೆ. ಹೀಗಾಗಿಯೇ ಕೇಂದ್ರ ತನಿಖಾ ತಂಡ ಅಲ್ಲಿಗೆ ಹೋದಾಗ ದಾಳಿ ನಡೆಸಲಾಗುತ್ತದೆ’. ಕಾನೂನು ಮತ್ತು ಸುವ್ಯವಸ್ಥೆ ಹಾಳುಗೆಡವಲು ಟಿಎಂಸಿ ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

Previous articleವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ೨೯ ತಾಸು ನಿರಂತರ ಚಿತ್ರಹಿಂಸೆ
Next articleಕೆಫೆ ಸ್ಫೋಟ-ಎಒನ್ ಆರೋಪಿ ಬಂಧನ