ಎಸ್.ಡಿ.ಪಿ.ಐ ನೇತೃತ್ವದಲ್ಲಿ ಕಾರ್ಯಕರ್ತರ ಪ್ರತಿಭಟನೆ
ಕೊಪ್ಪಳ: ಕ್ಷೌರದ ವಿಚಾರವಾಗಿ ಕೊಲೆ ಗೈದ ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಎಸ್.ಡಿ.ಪಿ.ಐ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕ್ಷೌರದ ವಿಚಾರಕ್ಕೆ ಕೊಲೆಯಾದ ದಲಿತ ಯುವಕ ಯಮನೂರಸ್ವಾಮಿ ಬಂಡಿಹಾಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಲದೇ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್.ಡಿ.ಪಿ.ಐ ಕಾರ್ಯದರ್ಶಿ ಸಲೀಂ ಖಾದ್ರಿ, ಎಸ್.ಡಿ.ಪಿ.ಐ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೇಕೊಪ್ಪ, ಕೊಪ್ಪಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅರ್ಷದ್ ಶೇಖ್, ಉಪಾಧ್ಯಕ್ಷ ಫಾರೂಕ್ ಅತ್ತಾರ, ಮತ್ತುರಾಘು ಚಾಕ್ರಿ, ಮಾರ್ಕಂಡಯ್ಯ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕಾಶಪ್ಪ ಚಲವಾದಿ, ಭಾರತೀಯ ಭೀಮ ಸೇನಾ ಜಿಲ್ಲಾಧ್ಯಕ್ಷ ಭರತ್ ಬಂಗಾರಿ ಇದ್ದರು.
