ಕ್ಷೇತ್ರ ಪುನರ್ವಿಂಗಡಣೆ: ತಮಿಳನಾಡು ಸಿಎಂನಿಂದ ಸಿಎಂಗೆ ಪತ್ರ

0
25

ಬೆಂಗಳೂರು: ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಭೆಗೆ ಸೇರಲು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಪತ್ರ ಬರೆದು ಆಹ್ವಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಬಿಜೆಪಿ-ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳ ವಿರುದ್ಧ ಪಿತೂರಿ ನಡೆಸುತ್ತಿದೆ. ಇದು ಕ್ಷೇತ್ರ ಪುನರ್ವಿಂಗಡಣೆಯಲ್ಲ, ಬದಲಾಗಿ ದಕ್ಷಿಣ ರಾಜ್ಯಗಳಿಗೆ ‘ಮಿತಿ’ಯಾಗಿದೆ. ನಾವು ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ನಿಲುವನ್ನು ನಾನು ಸ್ವಾಗತಿಸುತ್ತೇನೆ. ತಮಿಳುನಾಡು ಸಿಎಂ ಮಾರ್ಚ್ 22 ರಂದು ನಡೆಯುವ ಸಭೆಗೆ ಹಾಜರಾಗಲು ನನಗೆ ಸಾಧ್ಯವಾಗದಿದ್ದರೂ, ಕರ್ನಾಟಕವನ್ನು ಪ್ರತಿನಿಧಿಸಲು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರನ್ನು ಕೇಳಿಕೊಂಡಿದ್ದೇನೆ, ಒಕ್ಕೂಟ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

Previous articleರನ್ಯಾ ರಾವ್‌ ಪ್ರಕರಣ: ಸಿಐಡಿ ತನಿಖೆ ಹಿಂಪಡೆತ ಕುರಿತು ಪರಮೇಶ್ವರ್‌ ಸ್ಪಷ್ಟನೆ
Next articleಜನರ ತೆರಿಗೆ ದುಡ್ಡು ಕಾಂಗ್ರೆಸ್ಸಿಗರ ಜೇಬಿಗೆ