ಕ್ಷುಲ್ಲಕ ಕಾರಣಕ್ಕೆ ಸಹೋದರನ ಮೇಲೆ ಹಲ್ಲೆ

0
40

ಚಿಕ್ಕೋಡಿ: ಕ್ಷುಲ್ಲಕ ಕಾರಣಕ್ಕೆ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದವನ್ನು ರಾಜು ಬಾಡಕರ ಎಂದು ತಿಳಿದು ಬಂದಿದೆ.
ರಾಜು ಬಾಡಕರ ವಿದ್ಯುತ್ ಪ್ಯೂಸ್ ಹಾಕಿ ಎಂದು ಹೇಳಿದಾಗ ಸಹೋದರನಾದ ಭರಮಣ್ಣಾ ಬಾಡಕರ ಹಾಗೂ ಅತ್ತಿಗೆಯಾದ ರಾಧಾ ಬಾಡಕರ ಎಂಬುವವರು ಕಬ್ಬಿಣ ರಾಡನಿಂದ ಹಲ್ಲೆ ಮಾಡಿದ್ದಾರೆ ಎಂದು ರಾಜು ಆರೋಪಿಸಿದ್ದಾನೆ.
ಈ ಹಿಂದೆ ಕೂಡಾ ನನ್ನ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದರು‌ ಎಂದು ಸುರಿಯುತ್ತಿರುವ ರಕ್ತದ ಮಡುವಿನಲ್ಲಿ ಅಂಕಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Previous articleಹಿರೇಬಾಗೇವಾಡಿಯಲ್ಲಿ ಸರಣಿ ಅಪಘಾತ
Next articleಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ