ಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ಕೊಂದ ತಮ್ಮ

ಶಿರಸಿ: ಕ್ಷುಲಕ ಕಾರಣವೊಂದಕ್ಕೆ ತಮ್ಮನೋರ್ವ ಅಣ್ಣನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿರಸಿ ತಾಲೂಕಿನ ಹುತ್ಗಾರಿನಲ್ಲಿ ರವಿವಾರ ಸಂಜೆ ನಡೆದಿದೆ.
ತ್ಯಾಗರಾಜ ಗಣಪತಿ ಮುಕ್ರಿ(೩೦) ಹುತ್ಗಾರ ಕೊಲೆಯಾದ ದುರ್ಧೈವಿ. ಈತನ ಸಹೋದರ ಶಿವರಾಜ ಗಣಪತಿ ಮುಕ್ರಿ ಕೊಲೆಯ ಆರೋಪಿತನಾಗಿದ್ದಾನೆ. ತಪ್ಪಿಸಲು ಬಂದ ಹೇಮಾವತಿ ತ್ಯಾಗರಾಜ ಮುಕ್ರಿ ಹಾಗೂ ರೋಹಿತ್ ಮಂಜುನಾಥ ಮುಕ್ರಿ ಮೇಲೂ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತ್ಯಾಗರಾಜ ಮುಕ್ರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.