ಕ್ರಿಕೆಟ್‌ ಆಡುವಾಗ ಬಾವಿಗೆ ಬಿದ್ದು ಬಾಲಕ ಸಾವು

ಹುಬ್ಬಳ್ಳಿ: ಕ್ರಿಕೆಟ್ ಆಡುವಾಗ ಬಾವಿ ಹತ್ತಿರ ಬಿದ್ದ ಬಾಲ್ ತರಲು ಹೋದ ಬಾಲಕನೋರ್ವ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಹಳೇಹುಬ್ಬಳ್ಳಿಯ ಶ್ರೀನಗರದಲ್ಲಿ ಗುರುವಾರ ನಡೆದಿದೆ.
ಹಳೇ ಹುಬ್ಬಳ್ಳಿಯ ದೀಪಕ ಮೆಣಸಿನಕಾಯಿ (16) ಮೃತಪಟ್ಟ ಬಾಲಕ. ಬಾಲಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವ ವೇಳೆ ಬಾಲ್ ಬಾವಿ ಹತ್ತಿರ ಹೋಗಿದೆ. ಆಗ ಬಾಲನ್ನು ತರಲು ಹೋದಾಗ ಬಾವಿಯಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬಾಲಕ ಮೃತ ದೇಹವನ್ನು ಹೊರಗೆ ತೆಗೆದು ಕೆಎಂಸಿಆರ್‌ಐಗೆ ರವಾನಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.