ಕೋಳಿ ಫಾರಂ ಮೇಲೆ ಇಡಿ ದಾಳಿ

0
36

ಕೊಪ್ಪಳ(ಕುಕನೂರು): ಕೋಳಿ ಫಾರಂ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ ಘಟನೆ ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕೋಳಿ ಫಾರಂ ರನ್ಯಾ ರಾವ್ ತಂದೆ ರಾಮಚಂದ್ರರಾವ್ ಸಂಬಂಧಿಯ ಹೆಸರಲ್ಲಿದ್ದು, ಹಾಗಾಗಿ ರನ್ಯಾ ರಾವ್ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವು ಬಾರಿ ರನ್ಯಾ ರಾವ್ ತಂದೆ ರಾಮಚಂದ್ರರಾವ್ ಬಂದು ಹೋಗಿದ್ದರು.
ಬುಧವಾರ ಬೆಳಿಗ್ಗೆಯಿಂದ ಕೋಳಿ ಫಾರಂ ಗೇಟ್ ಬಂದ್ ಮಾಡಿ, ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ದೆಹಲಿಯಿಂದ ಬಂದು, ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಭದ್ರತೆಗಾಗಿ ಬಿ.ಎಸ್.ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಪೊಲೀಸರನ್ನೂ ಬದಿಗಿಟ್ಟು ಕಾರ್ಯಾಚರಣೆ ಮಾಡಿರುವುದು ಗಮನಾರ್ಹ. ಸ್ಥಳೀಯ ಪೊಲೀಸರು ಈ ಬಗ್ಗೆ ಮಾಹಿತಿ ಇಲ್ಲ.

Previous articleಕೋಲಾರ ಡಿಸಿಸಿ ಬ್ಯಾಂಕಿಗೆ ಇಬ್ಬರು ಶಾಸಕರ ಅವಿರೋಧ ಆಯ್ಕೆ
Next articleಬಾನುಗೆ ಬೂಕರ್ ಪ್ರಶಸ್ತಿ ಕನ್ನಡಕ್ಕೊಂದು ಹಿರಿಮೆ