ಕೋಕ-ಕೋಲಾ ಹಾಫ್‌ಟೈಮ್‌ನಲ್ಲಿ ನಟ ಯಶ್

0
63

ಬೆಂಗಳೂರು: ಭಾರತೀಯ ಸೂಪರ್‌ಸ್ಟಾರ್ ಯಶ್ ಕೋಕ-ಕೋಲಾ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಕೋಕ್ ಹಾಫ್‌ಟೈಮ್ ಪ್ರಚಾರದ ಜಾಹೀರಾತನಲ್ಲಿ ಮಿಂಚಿದ್ದಾರೆ.
ಸರಿಯಾದ ಸಮಯಕ್ಕೆ ಬರುವ ಅಲ್ಪವಿರಾಮವು ಕೆಲವೊಮ್ಮೆ ನಮ್ಮ ದಿನನಿತ್ಯದ ಕೆಲಸಗಳ ನಡುವೆ ನಮಗೆ ಅತ್ಯಾವಶ್ಯಕವಾಗಿ ಬೇಕಾಗಿರುವುದನ್ನೇ ನೀಡಬಹುದು ಎಂಬುದನ್ನು ಆ ಮೂಲಕ ಒತ್ತಿಹೇಳಿದೆ. ಯಶ್ ಅವರನ್ನು ಜೊತೆಗೆ ಸೇರಿಸಿಕೊಳ್ಳುವ ಮೂಲಕ ಕೋಕ-ಕೋಲಾ ಅರ್ಥಪೂರ್ಣ ಅಲ್ಪವಿರಾಮಗಳನ್ನು-ಅಂದರೆ ಕೇವಲ ಸಮಯವನ್ನು ನಿಲ್ಲಿಸುವುದಕ್ಕಿಂತ ಹೆಚ್ಚಿನದನ್ನು ಮಾಡುವ ಕ್ಷಣಗಳನ್ನು ಕೋಕ್ ಹಾಫ್‌ಟೈಮ್‌ನೊಂದಿಗೆ ಆಚರಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ಗಿಜಿಗುಡುವ ಮಾರುಕಟ್ಟೆ ಸ್ಥಳದಲ್ಲಿ ಚಿತ್ರೀಕರಿಸಲಾಗಿರುವ ಹೊಸ ಪ್ರಚಾರ ಚಿತ್ರವು, ಯಶ್ ಅವರ ಅನಾಯಾಸ ಆಕರ್ಷಣೆ ಮತ್ತು ಹಾಫ್‌ಟೈಮ್ ಕ್ಷಣದ ಶಕ್ತಿಯನ್ನು ತೋರಿಸುತ್ತದೆ. ಅಕ್ಕಪಕ್ಕದ ಸ್ನೇಹಿತರು ಬೃಹತ್ತಾದ ಕಟೌಟ್‌ಅನ್ನು ಜೋಡಿಸಲು ಹೆಣಗುತ್ತಿದ್ದಾಗ, ಯಶ್, ಸೂಚನೆಗಳೊಂದಿಗಲ್ಲದೆ, ತಣ್ಣಗಿನ ಕೋಕ-ಕೋಲಾದೊಂದಿಗೆ ಒಂದು ಅಲ್ಪವಿರಾಮಕ್ಕೆ ಸಂಜ್ಞೆ ನೀಡುತ್ತಾರೆ. ಅವರೆಲ್ಲರೂ ಒಂದುಗೂಡುತ್ತಿದ್ದಂತೆ, ಈ ಬ್ರೇಕ್, ತಣ್ಣಗಿನ ಕೋಕ್‌ನೊಂದಿಗೆ ಅವರಿಗೆ ಅತ್ಯಾವ್ಯಶಕವಾಗಿ ಬೇಕಾಗಿದ್ದ ಬ್ರೇಕ್ ನೀಡಿ ಅವರನ್ನು ತಾಜಾಗೊಳಿಸಿ, ಮತ್ತೆ ತಮ್ಮ ಕೆಲಸವನ್ನು ಪೂರೈಸಲು ಅವರಿಗೆ ಹುರುಪು ನೀಡುತ್ತದೆ. ಕಟೌಟ್‌ನ ಅನಾವರಣವು ಸ್ವತಃ ಯಶ್ ಅವರದೇ ಆಗಿರುತ್ತದೆ.

ಕೋಕ-ಕೋಲಾ ಕಂಪನಿಯ ಭಾರತ ಮತ್ತು ಸೌತ್‌ವೆಸ್ಟ್ ಏಶ್ಯ ಆಪರೇಟಿಂಗ್ ಘಟಕದ ಕೋಕ-ಕೋಲ ವರ್ಗದ ಮಾರ್ಕೆಟಿಂಗ್ ವಿಭಾಗದ ಹಿರಿಯ ನಿರ್ದೇಶಕ ಕೌಶಿಕ್ ಪ್ರಸಾದ್ , “ಕೋಕ-ಕೋಲಾ ಎಂದರೆ, ಪ್ರತಿದಿನದ ಕ್ಷಣಗಳನ್ನು ಉನ್ನತೀಕರಿಸುವುದರ ಕುರಿತಾಗಿದೆ ಮತ್ತು ಕೋಕ್ ಹಾಫ್‌ಟೈಮ್, ಅಂತ್ಯವಿಲ್ಲದ ನಿತ್ಯಕರ್ಮಗಳ ನಡುವೆ ಒಂದು ಅಲ್ಪವಿರಾಮ ತೆಗೆದುಕೊಳ್ಳಲು, ಇನ್ನೂ ಉತ್ತಮವಾಗಬೇಕೆಂದರೆ, ಸ್ವಾದಿಷ್ಟವಾದ, ಮಂಜಿನಷ್ಟು ತಣ್ಣಗಿರುವ ಕೋಕ-ಕೋಲಾದೊಂದಿಗೆ ವಿಶೇಷವಾಗಿ ಒಂದು ಅಲ್ಪವಿರಾಮ ತೆಗೆದುಕೊಳ್ಳುವುದಕ್ಕೆ ಒಂದು ಆಹ್ವಾನವಾಗಿದೆ. ಕೋಕ-ಕೋಲಾ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸ್ವಾಗತಿಸುವುದಕ್ಕೆ ನಮಗೆ ಕೌತುಕ ಮತ್ತು ಉತ್ಸಾಹವೆನಿಸುತ್ತಿದೆ. ಅವರು ಅತ್ಯಂತ ನಿರೀಕ್ಷೆಯ ಕ್ಷಣಗಳಲ್ಲಿ ಒದಗುವ ಶಕ್ತಿಯ ಪ್ರತೀಕವಾಗಿದ್ದಾರೆ. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಅವರ ಕ್ರಿಯಾಶೀಲತೆ, ಪ್ರೇರಣೆ ನೀಡುವ ವ್ಯಕ್ತಿತ್ವ ಮತ್ತು ಜನರೊಂದಿಗಿನ ಸಂಬಂಧವನ್ನು, ಕೋಕ-ಕೋಲಾಕ್ಕೆ ನಿಖರವಾದ ವ್ಯಕ್ತಿಯಾಗಿ ನೋಡುತ್ತಾರೆ ಎಂದು ಆಶಿಸುತ್ತೇವೆ.” ಎಂದರು.

ಕೇವಲ ಒಂದು ಬ್ರೇಕ್ ಅಲ್ಲ:‌ ಕೋಕ-ಕೋಲಾದೊಂದಿಗೆ ತಮ್ಮ ಸಹಯೋಗದ ಬಗ್ಗೆ ಮಾತನಾಡುತ್ತಾ, ಸೂಪರ್ ಸ್ಟಾರ್ ಯಶ್, “ಹಾಫ್‌ಟೈಮ್ ಕೇವಲ ಒಂದು ಬ್ರೇಕ್ ಅಲ್ಲ- ಇದು ಮುಂದಿನ ದೊಡ್ಡ ಕ್ಷಣದ ಮುನ್ನಿನ ಮಿಂಚು ಮತ್ತು ಕೋಕ್, ಪ್ರತಿಯೊಂದು ಅಲ್ಪವಿರಾಮವನ್ನೂ ಒಂದು ಆಚರಣೆಯಾಗಿ ಭಾಸವಾಗುವಂತೆ ಮಾಡುತ್ತದೆ. ಕೋಕ-ಕೋಲಾದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದಕ್ಕೆ ನನಗೆ ಬಹಳ ಸಂತೊಷವಾಗಿದೆ- ಏಕೆಂದರೆ, ಕೋಕ್‌ನೊಂದಿಗೆ ಹಾಫ್‌ಟೈಮ್ ವಿಭಿನ್ನವಾಗಿ ಬಾರಿಸುತ್ತದೆ!” ಎಂದರು.

Previous articleರಾಜ್ಯದಲ್ಲಿ ಬಾಣಂತಿಯರ ಮರಣ ಪ್ರಮಾಣ ಇಳಿಕೆ
Next articleಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ, ಬಂಧನ