ಕೊಪ್ಪಳ: ನಗರದ ಎಗ್‌ರೈಸ್ ಅಂಗಡಿಗಳಿಗೆ ಕೊಳೆತ ಮೊಟ್ಟೆಗಳ ಸರಬರಾಜು ಮಾಡುವಾಗ ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ಕೊಳೆತ ಮೊಟ್ಟೆ ವಶಕ್ಕೆ ಪಡೆದಿದ್ದಾರೆ.
ಕೊಪ್ಪಳ ಬಳಿಯ ಪದ್ಮಜಾ ಕೋಳಿ ಫಾರ್ಮ್‌ನಿಂದ ಕೊಳೆತ ಕೋಳಿ ಮೊಟ್ಟೆಗಳನ್ನು ನಗರದ ಜೀಲಾನ ಪಾಷಾ ಎಂಬುವವರು ಎಗ್‌ರೈಸ್ ಅಂಗಡಿಗೆ ಮಾರಾಟ ಮಾಡುತ್ತಿದ್ದರು. ೩೦ ಮೊಟ್ಟೆ ಇರುವ ಟ್ರೈಯನ್ನು ೮೦ ರೂ.ಗೆ ಖರೀದಿಸುವ ಜೀಲಾನ ಪಾಷಾ ಎಗ್ ರೈಸ್ ಅಂಗಡಿಗಳಿಗೆ ೧೦೦ ರೂ.ಗೆ ಒಂದು ಟ್ರೈ ಮೊಟ್ಟೆ ಮಾರಾಟ ಮಾಡುತ್ತಾರೆ.
ಕೊಳೆತ ಮೊಟ್ಟೆಗಳಲ್ಲಿ ಮೂರು ಗಂಟೆಯೊಳಗೆ ಹುಳುಗಳಾಗುತ್ತವೆ. ಪಶು ಇಲಾಖೆಯ ಸಹಕಾರದೊಂದಿಗೆ ಕೋಳಿ ಫಾರ್ಮ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿ ಕೃಷ್ಣ ರಾಠೋಡ್ ಮಾಹಿತಿ ನೀಡಿದರು.