ಕೊಲ್ಲೂರಿಗೆ ನಟ ಸೂರ್ಯ ದಂಪತಿ

0
35

ಕುಂದಾಪುರ: ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಮತ್ತವರ ಪತ್ನಿ ನಟಿ ಜ್ಯೋತಿಕಾ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗ ಪೂರ್ಣಾಹುತಿಯಲ್ಲಿ ಭಾಗಿಯಾದರು. ಸೋಮವಾರ ರಾತ್ರಿಯೆ ಈ ಜೋಡಿ ಕೊಲ್ಲೂರಿಗೆ ಆಗಮಿಸಿತ್ತು. ದೇವಾಲಯ ಆಡಳಿತ ಮಂಡಳಿ ಸದಸ್ಯರು ಮತ್ತು ಅರ್ಚಕರು ಈ ಸ್ಟಾರ್ ಜೋಡಿಯನ್ನು ಬರಮಾಡಿಕೊಂಡು ಶ್ರೀ ದೇವಿಯ ಪ್ರಸಾದ ನೀಡಿ ಗೌರವಿಸಿದರು.
ಕಾಲಿವುಡ್ ದಂಪತಿ ನಟ ಸೂರ್ಯ ಹಾಗೂ ಜ್ಯೋತಿಕಾ ಜೋಡಿಯನ್ನು ನೋಡಲು ಅಭಿಮಾನಿಗಳು ನೆರೆದಿದ್ದರು. ಕರ್ನಾಟಕದಲ್ಲೂ ಸಹ ಸೂರ್ಯ ಹಾಗೂ ಜ್ಯೋತಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

Previous articleಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದವ ಬಾವಿಗೆ ಹಾರಿ ಆತ್ಮಹತ್ಯೆ
Next articleಮೂವರು ಪೆಡ್ಲರ್‌ಗಳ ಬಂಧನ: ಒಂದೂವರೆ ಲಕ್ಷ ಮೌಲ್ಯದ ಎಂಡಿಎ ವಶ