Home ತಾಜಾ ಸುದ್ದಿ ಕೊರಿಯಾ ಪ್ರವಾಸ: ರಾಜ್ಯಕ್ಕೆ ಬಂತು ಹೆಚ್ಚಿನ ಹೂಡಿಕೆ

ಕೊರಿಯಾ ಪ್ರವಾಸ: ರಾಜ್ಯಕ್ಕೆ ಬಂತು ಹೆಚ್ಚಿನ ಹೂಡಿಕೆ

0
113

ಬೆಂಗಳೂರು: ದಕ್ಷಿಣ ಕೋರಿಯಾದ ಐದು ದಿನಗಳ ಪ್ರವಾಸದಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಬಂದಿದೆ ಎಂದು ಕರ್ನಾಟಕ ರಾಜ್ಯ ಭಾರೀ ಮತ್ತು ಮಧ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ವಿದೇಶಿ ಕಂಪನಿಗಳಿಂದ ಬಂಡವಾಳ ಸೆಳೆಯವಲ್ಲಿ ಯಶಸ್ವಿಯಾಗಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 2025ರಲ್ಲಿ ಬೆಂಗಳೂರಿನಲ್ಲಿ KEB ಹಾನಾ ಬ್ಯಾಂಕ್ ಶಾಖೆ ಆರಂಭ, ಕ್ರಾಫ್ಟನ್ ಗೇಮಿಂಗ್ ಕಂಪೆನಿ; ರೂ. 1,245 ಕೋಟಿ ಹೂಡಿಕೆಗೆ ಆಸಕ್ತಿ, ಆಟೋ ಬಿಡಿಭಾಗಗಳ ತಯಾರಿಕಾ ಘಟಕ ಸ್ಥಾಪನೆಗೆ HYAC ಕಂಪೆನಿ ಒಲವು, ಸಿಯೋಲ್ ಮೇಯರ್ ಅವರೊಂದಿಗೆ ಹೂಡಿಕೆಗಿರುವ ಅವಕಾಶಗಳ ಕುರಿತು ಚರ್ಚೆ, ಜಿಯೊಂಗಿ ಉಪ ರಾಜ್ಯಪಾಲರೊಂದಿಗೆ KHIRCity ಕುರಿತು ಮಹತ್ವದ ಚರ್ಚೆ, ರಾಜ್ಯದಲ್ಲಿ ಗೋ ಪಿಜ್ಜಾ ಕಾರ್ಖಾನೆ ವಿಸ್ತರಣೆಗೆ ಸರ್ಕಾರದ ಬೆಂಬಲ , ಹೂಡಿಕೆ ಹೆಚ್ಚಳದಿಂದ ಉದ್ಯೋಗಗಳ ಸೃಷ್ಟಿ ವಿಪುಲವಾಗಿ ಜಾಗತಿಕ ಮಟ್ಟದಲ್ಲಿ ರಾಜ್ಯ ಕೈಗಾರಿಕಾ ವಲಯ ಬಲಗೊಳ್ಳುತ್ತಾ ಮುನ್ನಡೆದಿದೆ ಎಂದಿದ್ದಾರೆ.