ಕೊನೆಗೂ ಪ್ರಜ್ವಲ್​ ರೇವಣ್ಣ ಪ್ರತ್ಯಕ್ಷ‌

0
18

ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್​ ರೇವಣ್ಣ ಪ್ರತ್ಯಕ್ಷವಾಗಿದ್ದಾರೆ. ವಿಡಿಯೋ ಮೂಲಕ ಪೆನ್‌ಡ್ರೈವ್​ ಪ್ರಕರಣದ ಬಗ್ಗೆ ಮಾತನಾಡಿರುವ ಅವರು, ನಾನು ವಿದೇಶದಲ್ಲಿದ್ದು, ಮೇ 31ರಂದು ಶುಕ್ರವಾರ ಎಸ್‌ಐಟಿ ಮುಂದೆ ಹಾಜರಾಗುತ್ತೇನೆಂದು ಹೇಳಿದ್ದಾರೆ.
ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಪ್ರಜ್ವಲ್‌, “ಏ.26ರಂದು ಚುನಾವಣೆ ಮುಗಿದಿದ್ದು, ಮರುದಿನ ನನ್ನ ವಿದೇಶ ಪ್ರವಾಸ ಪೂರ್ವ ನಿಗದಿಯಾಗಿತ್ತು. ಅಂದು ಯಾವುದೇ ಪ್ರಕರಣ ಕೂಡ ದಾಖಲಾಗಿರಲಿಲ್ಲ. ಆದರೆ, ಮೂರ್ನಾಲ್ಕು ದಿನಗಳ ಬಳಿಕ ನನಗೆ ಈ ವಿಷಯ ತಿಳಿದಿದೆ. ಆದರೆ, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ. ರಾಜಕೀಯವಾಗಿ ನಾನು ಬೆಳೆಯಬಾರದೆಂದು ಇಂತಹ ಕೆಲಸವನ್ನು ಮಾಡಿದ್ದಾರೆ. ಇಂತಹ ಸುದ್ದಿ ತಿಳಿದು ನಾನೂ ಕೂಡ ಡಿಪ್ರೆಶನ್‌ಗೆ ಹೋಗಿದ್ದೆ. ಹೀಗಾಗಿ ಪ್ರತಿಕ್ರಿಯಸಲು ಆಗಿಲ್ಲ. ಇದಕ್ಕಾಗಿ ಎಲ್ಲರಲ್ಲೂ ಕ್ಷೇಮೆ ಕೇಳುತ್ತೇನೆ. ಮೇ 31ರಂದು ಶುಕ್ರವಾರ ಮುಂಜಾನೆ 10ಗಂಟೆಗೆ ಎಸ್‌ಐಟಿ ಮುಂದೆ ಖುದ್ದು ನಾನೇ ಹಾಜರಾಗಿ ವಿಚಾರಣೆಗೆ ಸಹಕರಿಸುತ್ತೇನೆ” ಎಂದು ಹೇಳಿದ್ದಾರೆ.

Previous articleರೈಲ್ವೆ ಹಳಿಗೆ ಬಿದ್ದು ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆ
Next articleಹುಬ್ಬಳ್ಳಿಗೆ ಬಂದಿಳಿದ ಸಿಐಡಿ ಡಿಜಿಪಿ ಡಾ.ಎಂ.ಎ‌. ಸಲೀಂ