ಕೈಗಾರಿಕಾ ಶಕ್ತಿ ಕೇಂದ್ರವಾಗಿ ಬದಲಾಗುತ್ತಿದೆ ಕರ್ನಾಟಕ!

0
25

ಬೆಂಗಳೂರು: ಜಪಾನ್ ಭೇಟಿಯ ಯಶಸ್ಸಿನ ಫಲವಾಗಿ #Nidec ಕಾರ್ಪೊರೇಷನ್ ಹುಬ್ಬಳಿ ಧಾರವಾಡದಲ್ಲಿ ₹150 ಕೋಟಿ ಹೆಚ್ಚುವರಿ ಹೂಡಿಕೆಗೆ ಮುಂದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈಗಾಗಲೇ ಮಾಡಿರುವ ಹೂಡಿಕೆಯೂ ಸೇರಿ ಒಟ್ಟು 600 ಕೋಟಿಗಳಾಗಲಿದ್ದು, 800 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ, EV ವಾಹನಗಳ ಉತ್ಪಾದನೆಗೆ ಹುಬ್ಬಳಿ-ಧಾರವಾಡದಲ್ಲಿ ಮತ್ತಷ್ಟು ಬಲ ದೊರಕುತ್ತಿದ್ದು, ಡೇಟಾ ಸೆಂಟರ್‌ಗಳು ಮತ್ತು ನವೀಕರಿಸಬಹುದಾದ ಇಂಧನ ಉದ್ಯಮಗಳು ಸಹ ಇಲ್ಲಿ ಸ್ಥಾಪನೆಯಾಗಲಿದೆ. ಕರ್ನಾಟಕವು ಕೈಗಾರಿಕಾ ಶಕ್ತಿ ಕೇಂದ್ರವಾಗಿ ಬದಲಾಗುತ್ತಿದೆ ಎಂದಿದ್ದಾರೆ.

Previous articleಸಿಎಂ ಸಿದ್ದರಾಮಯ್ಯಗೆ ‘ಪತ್ರಿಕಾ ವಿತರಕರ ಬಂಧು’ ಬಿರುದು ನೀಡಿ ಸನ್ಮಾನ
Next articleರಾಜ್ಯದಲ್ಲಿ ಮತಾಂಧರಿಗೆ ಸರ್ಕಾರದ್ದೇ ಕೃಪಾಕಟಾಕ್ಷ!