ಕೇವಲ 5 ದಿನಗಳಲ್ಲೇ ಅಲ್ಲಿ ಅಭಿವೃದ್ಧಿಯ ಯುಗ ಆರಂಭಗೊಂಡಿದೆ!

0
10

ಬೆಂಗಳೂರು: ಕೇವಲ 5 ದಿನಗಳಲ್ಲೇ ಅಲ್ಲಿ ಅಭಿವೃದ್ಧಿಯ ಯುಗ ಆರಂಭಗೊಂಡಿದೆ! ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದೀಜಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೇವಲ 5 ದಿನಗಳಲ್ಲೇ ಅಲ್ಲಿ ಅಭಿವೃದ್ಧಿಯ ಯುಗ ಆರಂಭಗೊಂಡಿದೆ!
ದೇಶದ ಹೆಮ್ಮೆಯ ಉದ್ಯಮ ಸಂಸ್ಥೆಯಾದ ಟಾಟಾ ಸಮೂಹ ಅಲ್ಲಿನ ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ಎರಡು ರೆಸಾರ್ಟ್‌ ಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಪ್ರತಿ ರೆಸಾರ್ಟ್‌ ನಲ್ಲೂ 110 ರೂಂಗಳಿರಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಡವಾಳವೂ ಹರಿದುಬರುವ ಸಾಧ್ಯತೆಯಿದೆ. ಕೇವಲ ಇನ್ನೊಂದು ವರ್ಷದಲ್ಲಿ ಲಕ್ಷದ್ವೀಪ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಸ್ವತಃ ಬ್ರ್ಯಾಂಡ್ ಆಗಿರುವವರು ಯಾವುದಾದರೊಂದು ಒಳ್ಳೆಯ ಕೆಲಸಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆದರೆ ಎಂಥಾ ಚಮತ್ಕಾರವಾಗಬಹುದು ಅನ್ನುವುದಕ್ಕೆ ಇದು ಉದಾಹರಣೆ! ಎಂದಿದ್ದಾರೆ.

Previous articleರಾಜ್ಯಪಾಲರಿಗೆ ಕೋವಿಡ್ ಪಾಸಿಟಿವ್
Next articleಕಾರು ಅಪಘಾತ: ರಜತ್ ಉಳ್ಳಾಗಡ್ಡಿಮಠ ಪಾರು