ಕೇಜ್ರಿವಾಲ್‌ಗೆ ಜಾಮೀನಿಲ್ಲ

0
10

ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಏ. ೩ರಂದು ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿದೆ. ಇದರಿಂದಾಗಿ ಇನ್ನೂ ಒಂದು ವಾರ ಕಾಲ ಆಮ್ ಆದ್ಮಿ ಪಕ್ಷದ ವರಿಷ್ಠ ಸೆರೆಮನೆಯಲ್ಲಿರಬೇಕಾಗಿದೆ.
ಅಮೆರಿಕಕ್ಕೆ ಭಾರತ ತರಾಟೆ: ಅಬಕಾರಿ ಪ್ರಕರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌ರನ್ನು ಇ.ಡಿ ಬಂಧಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕದ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕೇಜ್ರಿವಾಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜರ್ಮನಿಗೆ ಪ್ರತಿಭಟನೆ ಸಲ್ಲಿಸಿದ್ದ ವಿದೇಶಾಂಗ ಇಲಾಖೆ, ಅಮೆರಿಕದ ಉಸ್ತುವಾರಿ ರಾಯಭಾರಿ ಗ್ಲೋರಿಯಾ ಬರ್ಬೆನಾರನ್ನು ಭಾರತದ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವುದು ಸಲ್ಲ ಎಂಬ ಎಚ್ಚರಿಕೆ ನೀಡಿದೆ. ಇತರ ದೇಶಗಳ ಸಾರ್ವಭೌಮತ್ವಕ್ಕೆ ಗೌರವಿಸಬೇಕಾದುದು ಇನ್ನೊಂದು ದೇಶದ ಕರ್ತವ್ಯ. ಆದರೆ ಈಗಿನ ಧೋರಣೆಯಿಂದ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟರು.

Previous articleರಾಜ್ಯದ ೬೦ ಕಡೆ ಲೋಕಾಯುಕ್ತ ದಾಳಿ
Next articleಯುವನ್ಯಾಯ ಗ್ಯಾರಂಟಿ ಬಿಡುಗಡೆ