ಕೇಂದ್ರ ಸರ್ಕಾರದ ವೈಫಲ್ಯದಿಂದ ದಾಳಿ

0
16

ಮೋದಿ ಸಹ ಇಂದಿರಾ ಗಾಂಧಿಯಂತೆ ದಿಟ್ಟ ಕ್ರಮ ಕೈಗೊಳ್ಳಬೇಕು

ಸಂ.ಕ. ಸಮಾಚಾರ ಕಲಬುರಗಿ: ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ‌ ಸೇನೆಯಲ್ಲಿ ನೇಮಕಾತಿ ಮಾಡಿಕೊಂಡಿಲ್ಲ, ಹೀಗಾಗಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ 20 ಕ್ಕೂ ಹೆಚ್ಚು ಪ್ರವಾಸಿಗರ ಬಲಿ ಪ್ರಕರಣದಲ್ಲಿ ಕೇಂದ್ರ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ.ಅಗ್ನಿ ವೀರ ಅಂತ ಕೇವಲ ಕೆಲವು ವರ್ಷಕ್ಕೆ ಸೀಮಿತವಾಗಿ ಮಾಡಿಕೊಳ್ಳುತ್ತಿದೆ.
ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ.. ಆದರೆ ಸೇನಾ ನೇಮಕಾತಿ ನಡೆಯುತ್ತಿಲ್ಲ ಎಂದು ಟೀಕಿಸಿದರು. ಸೇನಾ ನೇಮಕಾತಿ ಮಾಡಿಕೊಂಡು ಬಂದೋಬಸ್ತ್ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಕೇಂದ್ರ ಗುಪ್ತ ಚರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಆಗ್ರಹಿಸಿದರು.

ಉಗ್ರರನ್ನು ಸದೆ ಬಡಿಯುವ ಕೆಲಸ ಪ್ರಧಾನಿ ಮೋದಿ ಮಾಡಬೇಕು. ಉಗ್ರರ ಮೂಲ ಗುರುತಿಸಿ ಸದೆ ಬಡೆಯಲು ಮಾಡಬೇಕಾದ ಎಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಇಂದಿರಾಗಾಂಧಿ ಪ್ರಧಾನಿ ಇದ್ದಾಗ ಶತ್ರು ರಾಷ್ಟ್ರ ಇಬ್ಬಾಗ ಆಗುವಂತೆ ಮಾಡಿದ್ದರು. ಅದಕ್ಕಾಗಿಯೇ ದೇಶ ಅವರನ್ನು ಉಕ್ಕಿನ ಮಹಿಳೆ ಎನ್ನುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಇಂದಿರಾ ಗಾಂಧಿಯಂತೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

Previous articleಪಹಲ್ಗಾಮ್ ದಾಳಿ: ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ
Next articleಮುಸ್ಲಿಂ ಉಗ್ರವಾದಿತ್ವವನ್ನು ಸಂಹಾರ ಮಾಡುವ ಸಮಯ ಬಂದಿದೆ