ಕೇಂದ್ರದ 15ನೇ ರೋಜಗಾರ ಮೇಳಕ್ಕೆ ವರ್ಚುವಲ್ ವೇದಿಕೆಯಲ್ಲಿ ಪ್ರಧಾನಿ ಚಾಲನೆ

0
26

ಹುಬ್ಬಳ್ಳಿ: ಪರಿಶ್ರಮದಿಂದ ಉದ್ಯೋಗ ಪಡೆಯುವ ಮೂಲಕ ನಿಮ್ಮ ಕನಸು ಸಾಕಾರ ಮಾಡಿಕೊಂಡಿದ್ದೀರಿ. ದೇಶದ 140 ಕೋಟಿ ಜನರ ಕನಸು ಸಾಕಾರಗೊಳಿಸುವ ಹೊಣೆ ನಿಮ್ಮದಾಗಿದೆ. ದೇಶದ ಜನರೇ ದೇವರು. ನಾಗರಿಕ ದೇವೋಭವ ಎಂದು ನಾಗರಿಕರಿಗೆ ಸೇವೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ದೇಶಾದ್ಯಂತ 47 ಸ್ಥಳಗಳಲ್ಲಿ ಸರ್ಕಾರಿ ಸೇವೆಗಳಿಗೆ ಆಯ್ಕೆಯಾದ 51 ಸಾವಿರ ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮಕ್ಕೆ ವರ್ಚಾಚುವಲ್ಲ ವೇದಿಕೆ ಮುಖಾಂತರ ಚಾಲನೆ ನೀಡಿ ಮಾತನಾಡಿದರು.

ಇಲ್ಲಿನ ಬಿವಿಬಿ ಕಾಲೇಜಿನ ಆವರಣದಲ್ಲಿನ ದೇಶಪಾಂಡೆ ಫೌಂಡೇಶನ್ ನ ತರಬೇತಿ ಕೇಂದ್ರದ ಸಭಾವನದಲ್ಲಿ ಆದಾಯ ತೆರಿಗೆ ಇಲಾಖೆಯು ಆಯೋಜಿಸಿದ್ದ ಉದ್ಯೋಗ ಮೇಳ ದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಗೊಂಡ 51 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಕೇಂದ್ರ ಯುವಜನ ಮತ್ತು ಇಲಾಖೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಕಾಡ್ಸಾ ಅವರು ನೇಮಕಾತಿ ಆದೇಶ ಪತ್ರಗಳನ್ನು ಅಭ್ಯರ್ಥಿಗಳಿಗೆ ವಿತರಿಸಿದರು. ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಶಿಶಿರ ಧಮಜಿ ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡ 51 ಅಭ್ಯರ್ಥಿಗಳಿಗೆ ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಕಾಡ್ಸಾ ಅವರು ನೇಮಕಾತಿ ಆದೇಶ ಪತ್ರ ವಿತರಿಸಿದರು. ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ , ಶಾಸಕ ಮಹೇಶ ಟೆಂಗಿನಕಾಯಿ , ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಶಿಶಿರ ಧಮಜಿ ವೇದಿಕೆಯಲ್ಲಿದ್ದರು.

Previous articleಸಿಡಿಲಿಗೆ ಹೊತ್ತಿ ಉರಿದ ವಾಹನ
Next articleಚಂದನ್​ ಶೆಟ್ಟಿಯ ‘ಸೂತ್ರಧಾರಿ’ ಟ್ರೈಲರ್ ಅನಾವರಣ