ಕೆಮ್ಮಣ್ಣುಗುಂಡಿ ಸುತ್ತಮುತ್ತ ಹುಲಿ, ಕರಡಿ ಓಡಾಟ

0
34

ಚಿಕ್ಕಮಗಳೂರು: ರಾಜ್ಯದ ಪ್ರಸಿದ್ಧ ಗಿರಿಧಾಮ ಕೆಮ್ಮಣ್ಣುಗುಂಡಿ ಸುತ್ತ ಮುತ್ತ ಹುಲಿ ಮತ್ತು ಕರಡಿ ಓಡಾಟದಿಂದ ಜನರಿಗೆ ಆತಂಕ ಮನೆಮಾಡಿದೆ.
ಕಳೆದ ಒಂದು ತಿಂಗಳಿಂದ ಹುಲಿ ರಾಜಾ ರೋಷವಾಗಿ ಸಂಜೆ ಆರು ಎಂಟು ಗಂಟೆವರೆಗೆ ಮತ್ತು ಬೆಳಗ್ಗೆ ಏಳೆಂಟು ಗಂಟೆಯವರೆಗೆ ರಸ್ತೆ ಅಕ್ಕ ಪಕ್ಕ ಓಡಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದು,ಕೆಮ್ಮಣ್ಣುಗುಂಡಿ, ಕಲ್ಲತ್ತಿಪುರ,ಕೇಶವಮೂರ್ತಿ ಎಸ್ಟೇಟ್ ಮತ್ತು ಸಣ್ಣಖಾನ್ ಎಸ್ಟೇಟ್ ಸುತ್ತಮುತ್ತಲಿನಲ್ಲಿ ಹುಲಿ ಓಡಾಡುತ್ತಿದೆ ಕಳೆದ ಮೂರು ದಿನಗಳ ಹಿಂದೆ ಕೆಮ್ಮಣ್ಣುಗುಂಡಿ ಐ,ಬಿ ಸಮೀಪ ಒಂದು ಗಂಟೆಗಳ ಕಾಲ ಓಡಾಟ ನಡೆಸಿದೆ.
ಈ ಬಗ್ಗೆ ಕೆಮ್ಮಣ್ಣುಗುಂಡಿ ರಾಜಭವನದ ನೌಕರರನ್ನು ಕೇಳಿದರೆ ಭದ್ರ ಅಭಯಾರಣ್ಯವಾಗಿರುವುದರಿಂದ ಪ್ರಾಣಿಗಳ ಓಡಾಟ ಸಹಜ ಎನ್ನುತ್ತಾರೆ. ಆದರೆ ಹುಲಿ ಐದಾರು ದನಗಳ ಶಿಕಾರಿ ಮಾಡಿದೆ ಮನುಷ್ಯರ ತಂಟೆ ಬಂದಿಲ್ಲ, ಅರಣ್ಯ ಇಲಾಖೆ ಗಮನಕ್ಕೆ ತಂದರು ಯಾವುದೆ ಪ್ರಯೋಜವಾಗಿಲ್ಲ

Previous articleಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತದೆ.
Next articleಬಜೆಟ್‌ನಲ್ಲಿ ನಿರೀಕ್ಷೆ ಇಲ್ಲ, ಏಕೆಂದರೆ ಘೋಷಣೆ ಮಾಡಿದ್ದೇ ಇನ್ನೂ ಕೊಟ್ಟಿಲ್ಲ