ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ನಿರ್ಧಾರ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಅದು ನಮ್ಮ ಮಟ್ಟದಲ್ಲಿಲ್ಲ. ಹೈಕಮಾಂಡ್ ಅವರೇ ನಿರ್ಧಾರ ಮಾಡುತ್ತಾರೆ, ಕಾದು ನೋಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನಾವು ಆ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಹೈಕಮಾಂಡ್‌ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇವೆ. ಹೈಕಮಾಂಡ್ ಅವರೇ ನಿರ್ಧಾರ ಮಾಡುತ್ತಾರೆ ಕಾದು ನೋಡೋಣ ಇನ್ನೂ ಸಾಕಷ್ಟು ಸಮಯ ಇದೆ ಎಂದರು.
ಹನಿಟ್ರಾ÷್ಯಪ್‌ಗೆ ಸಂಬಂಧಪಟ್ಟಂತೆ ರಾಜಣ್ಣ, ರಾಜೇಂದ್ರ ದೂರು ವಿಚಾರ ಅದು ಪೊಲೀಸ್ ತನಿಖೆ ಮಾಡಬೇಕು, ನಾವೇನು ಹೇಳೋದು. ತನಿಖೆ ಮಾಡಲಿ ಕಾದು ನೋಡೋಣ. ಮಹಾನಾಯಕ ಯಾರು ಎಂಬ ವಿಚಾರಕ್ಕೆ ಅವೆಲ್ಲ ನಮಗೆ ಹೇಗೆ ಗೊತ್ತು ನಾವು ಯಾರು ಅಂತ ಹೇಳಲಿಕ್ಕೆ ಆಗುತ್ತೆ. ಏಜೆನ್ಸಿ ಅವರು ಹೇಳ್ಬೇಕು ನಾವು ಹೇಳೋಕೆ ಆಗಲ್ಲ. ಸಮಯ ಬಂದಾಗ ಹೇಳೋಣ ಎಂದರು.
ಜಾರ್ಜ್ ನಿವಾಸದಲ್ಲಿ ಸುದೀರ್ಘ ಚರ್ಚೆ ವಿಚಾರ ನಮ್ಮ ಜಿಲ್ಲೆ ಹಾಗೂ ಅವರ ಇಲಾಖೆಗೆ ಸಂಬಂಧಪಟ್ಟ ಕೆಲಸ ಇರುತ್ತೆ. ಅವರು ನಮ್ಮ ಮಂತ್ರಿಗಳು, ನಾವು ಭೇಟಿಯಾಗಿರ್ತಿವಿ. ಎಲ್ಲದಕ್ಕೂ ರಾಜಕೀಯ ಬೆರೆಸಲು ಆಗುವುದಿಲ್ಲ, ಅಭಿವೃದ್ಧಿಗಾಗಿ ಭೇಟಿಯಾಗಿರುತ್ತೇವೆ ಎಂದು ತಿಳಿಸಿದರು.