ಕೆಎಎಸ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಭಟನೆ

0
104


ಬಳ್ಳಾರಿ: ಇಂದು ನಡೆದ ಕೆಎಎಸ್ ಪರೀಕ್ಷೆಯ ಪೇಪರ್-1 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ‌ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಪರೀಕ್ಷಾರ್ಥಿಗಳಿಂದ ಕೆಪಿಎಸ್ಸಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ,
ಬಳ್ಳಾರಿಯ ಸೇಂಟ್ ಜಾನ್ಸ್ ಶಾಲೆಯ ಪರೀಕ್ಷಾ ಕೇಂದ್ರದ ಪ್ರತಿಭಟನೆ ನಡೆಸಿದರು.
ಇಲ್ಲಿ ನಡೆಯುತ್ತಿದ್ದ ಪರೀಕ್ಷೆ‌ ವೇಳೆ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಓಪನ್ ಆಗಿರೋ ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎಂದು ಆರೋಪಿಸಲಾಯಿತು.
ಪರೀಕ್ಷಾ ಕೇಂದ್ರಕ್ಕೆ ಬರೋ ಮುಂಚೆಯೇ ಪ್ರಶ್ನೆ ಪತ್ರಿಕೆ ಸೀಲ್ ಓಪನ್ ಆಗಿತ್ತು.
ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಪ್ರಶ್ನಿಸಿದ್ರೂ ಆಮೇಲೆ ನೋಡೋಣ ಎಂದು ಸಮಜಾಯಿಷಿ ನೀಡಿದ್ರಂತೆ ಕೊಠಡಿ ಮೇಲ್ವಿಚಾರಕರು.
ಹೀಗಾಗಿ ಪರೀಕ್ಷೆ ಬರೆದು ಹೊರಗೆ ಬಂದ್ಮೇಲೆ ಪರೀಕ್ಷಾರ್ಥಿಗಳ ಆಕ್ರೋಶ. ಸೇಂಟ್ ಜಾನ್ ಪದವಿ ಪೂರ್ವ ಕಾಲೇಜಿನ ರೂಂ ನಂ 18 ಹಾಗೂ 19 ಓಪನ್ ಆಗಿರೋ ಪ್ರಶ್ನೆ ಪತ್ರಿಕೆ ಬಂದಿರೋದಾಗಿ ಗಂಭೀರ ಆರೋಪ.‌‌ ಹೀಗಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳ ಆಕ್ರೋಶ
ಮರು ಪರೀಕ್ಷೆ ಬರೆಸಬೇಕು ಎಂದು ಅಭ್ಯರ್ಥಿಗಳ ಒತ್ತಾಯ‌ ಮಾಡಿದರು.

Previous articleಅಳವಂಡಿಯ ಜನಸ್ಪಂದನಾ ಕಾರ್ಯಕ್ರಮಕ್ಕೆ ಡಿಸಿ ಚಾಲನೆ
Next articleಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು ಎನ್ನುವುದು ಸರ್ಕಾರದ ಗುರಿ