ವಿಕಸಿತ ಭಾರತ ಗುರಿ ತಲುಪಲು ಕೃಷಿಗೆ ಒತ್ತು ನಿಡಿದರೆ ಮಾತ್ರ ಸಾಧ್ಯ
ಧಾರವಾಡ: ವಿಶ್ವದಲ್ಲಿ ಭಾರತ ಶಕ್ತಿಶಾಲಿಯಾಗಿ ಬೆಳೆದು ನಿಲ್ಲಲು, ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲು ಈ ದೇಶದ ಕೃಷಿ ಸದೃಡವಾಗಿ ಬೆಳೆದರೆ ಮಾತ್ರ ಸಾಧ್ಯ ಎಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ವಿದ್ಯಾಲಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಕಸಿತ ಭಾರತ ಗುರಿ ತಲುಪಲು ಕೃಷಿಗೆ ಒತ್ತು ನಿಡಿದರೆ ಮಾತ್ರ ಸಾಧ್ಯ ಎಂದರು.
ಕೃಷಿ ಆಧಾರಿತ ಕೈಗಾರಿಕೆಗಳು ಇಂದು ಹೆಚ್ಚಿನ ಲಾಭ ಪಡೆಯುತ್ತಿವೆ. ಅದರ ಸಮನಾಗಿ ರೈತರು ಲಾಭ ಪಡೆಯುವಂತೆ ಆಗಲು ಕೈಗಾರಿಕೆಗಳು ತಮ್ಮ ಸಿಎಸ್‌ಆರ್ ಅನುದಾನವನ್ನು ಕೃಷಿ ಸಂಶೋಧನೆಗೆ ಮೀಸಲಿಡಬೇಕು ಎಂದರು. ಶೀತಲ ಗೃಹ ನಿರ್ಮಾಣ ಮತ್ತು ಮಾರುಕಟ್ಟೆ ಮೌಲ್ಯವರ್ಧಿನೆ, ರೈತನ ಮಕ್ಕಳಿಗೆ ಕೃಷಿ ವಸ್ತುಗಳನ್ನು ರಫ್ತು ಮಾಡುವ ತರಬೇತಿ ನೀಡಬೇಕು ಎಂದರು. ಉಪರಾಷ್ಟ್ರಪತಿಗಳ ಪತ್ನಿ ಸುದೇಶ ಧನಕರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕುಲಪತಿ ಡಾ. ಪಿ.ಎಲ್. ಪಾಟೀಲ ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಕೃಷಿ ವಿಶ್ವವಿದ್ಯಾಲಯ ಸಿಬ್ಬಂದಿ ಹಾಜರಿದ್ದರು.